Wednesday, May 21, 2025
Google search engine

Homeಸ್ಥಳೀಯಕಾವೇರಿ ನೀರಿಗಾಗಿ ಮುಂದಿನ ದಿನಗಳಲ್ಲಿ ಜನ ದಂಗೆ ಏಳುತ್ತಾರೆ: ಮಾಜಿ ಶಾಸಕ ಎಲ್.ನಾಗೇಂದ್ರ

ಕಾವೇರಿ ನೀರಿಗಾಗಿ ಮುಂದಿನ ದಿನಗಳಲ್ಲಿ ಜನ ದಂಗೆ ಏಳುತ್ತಾರೆ: ಮಾಜಿ ಶಾಸಕ ಎಲ್.ನಾಗೇಂದ್ರ

ಮೈಸೂರು : ಮುಂದಿನ ದಿನಗಳಲ್ಲಿ ಮೈಸೂರು ಭಾಗದ ಜನ ಕಾವೇರಿ ನೀರಿಗಾಗಿ ದಂಗೆ ಹೇಳಲಿದ್ದಾರೆ ಎಂದು ಮಾಜಿ ಶಾಸಕ ಎಲ್ ನಾಗೇಂದ್ರ ತಿಳಿಸಿದ್ದಾರೆ. ನಗರದಲ್ಲಿ ನಡೆಯುತ್ತಿರುವ ಕಾವೇರಿ ಕ್ರಿಯಾ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ಕಾವೇರಿ ಉಳಿಸಿ ಹೋರಾಟದಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿ ಮಾತನಾಡುತ್ತಾ ಇಂಡಿಯಾ ಒಕ್ಕೂಟದ ಅಂಗ ಪಕ್ಷ ಡಿಎಂಕೆ ನಾಯಕರನ್ನು ಮೆಚ್ಚಿಸಲು ಕಾವೇರಿ ವಿಚಾರವಾಗಿ ರಾಜ್ಯದ ಯಾವೊಬ್ಬ ಕಾಂಗ್ರೆಸ್ ನಾಯಕರು ತುಟಿ ಬಿಚ್ಚುತ್ತಿಲ್ಲ.

ಕೆ.ಆರ್.ಎಸ್. ನಿಂದ ನೀರು ಹರಿದು ತಮಿಳುನಾಡಿಗೆ ಸೇರುತ್ತಿದ್ದು ಮೈಸೂರು ಭಾಗದ ರೈತರು ಕಂಗಾಲಾಗಿದ್ದು ಈಗಾಗಲೇ ಅಣೆಕಟ್ಟೆಯಲ್ಲಿ 89 ಅಡಿಗಳಿಗೆ ನೀರು ಕುಸಿದಿದ್ದು ಇದರಲ್ಲಿ ಹಲವು ಅಡಿಗಳು ಹೂಳಿನಿಂದ ಕೂಡಿದ್ದು ಮುಂದಿನ ದಿನಗಳಲ್ಲಿ ಮೈಸೂರು, ಬೆಂಗಳೂರು ಜನತೆಗೆ ಕುಡಿಯುವ ನೀರು ಸಿಗುವುದಿಲ್ಲ ಕಾವೇರಿ ವಿಚಾರವಾಗಿ ಪಾದಯಾತ್ರೆ ಮಾಡಿದ ಡಿಕೆ ಶಿವಕುಮಾರ್ ಏನು ಗೊತ್ತಿಲ್ಲದ ರೀತಿ ಇದ್ದು ಕಾಂಗ್ರೆಸ್ ನಾಯಕರುಗಳು ಮುಖ್ಯಮಂತ್ರಿ ಕುರ್ಚಿಗಾಗಿ ಗುದ್ದಾಟದಲ್ಲಿ ತೊಡಗಿದ್ದು ಸಾರ್ವಜನಿಕರು ಈ ವಿಚಾರವಾಗಿ ಕಾಂಗ್ರೆಸ್ ಸರಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.

ಈ ಪ್ರತಿಭಟನೆಯಲ್ಲಿ ಪಡುವಾರಳ್ಳಿ ಗ್ರಾಮೋದ್ಯೋಯ ಟ್ರಸ್ಟ್ ನ ಸದಸ್ಯರು , ಕಾವೇರಿ ಕ್ರಿಯಾ ಸಮಿತಿಯ ಮೆಲ್ಲಹಳ್ಳಿ ಮಹದೇವಸ್ವಾಮಿ, ಸುರೇಶ್ ಗೌಡ, ರೈತ ಮುಖಂಡ ವರಕೋಡು ಕೃಷ್ಣೆಗೌಡ ಪಾಲಿಕೆ ಮಾಜಿ ಸದಸ್ಯ ಚಿಕ್ಕವೆಂಕಟು, ಬಿಜೆಪಿ ಮುಖಂಡ ಬಾಬು ಆಚಾರ್, ರಾಘವ. ಎಂ.ಗೌಡ, ಮಂಜು, ಬಸವರಾಜು,ಸುರೇಶ್ ,ಜೆಸಿಬಿ ರವಿ, ಪುಷ್ಪ , ವೇಣು, ಗೋಪಾಲ, ಸ್ವಾಮಿ ಮುಂತಾದವರಿದ್ದರು.

RELATED ARTICLES
- Advertisment -
Google search engine

Most Popular