ಮಂಡ್ಯ: ರೈತನ ಜಮೀನಿಗೆ ನುಗ್ಗಿದ ಕಾಡಾನೆ, ಕಟಾವು ಮಾಡಿದ್ದ ಭತ್ತದ ಬೆಳೆ ನಾಶ ಮಾಡಿರುವ ಘಟನೆ ಮಂಡ್ಯದ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಾಡಾನೆ ದಾಳಿಯಿಂದ ರಮೇಶ್ ಹಾಗೂ ಮಹೇಶ್ ಎಂಬುವರಿಗೆ ಸೇರಿದ 30 ಸಾವಿರರೂ ಮೌಲ್ಯದ ಭತ್ತದ ಫಸಲು ನಾಶವಾಗಿದೆ.
ಫಸಲು ನಾಶದಿಂದ ಕಂಗಾಲಾಗಿರುವ ರೈತರು ಪರಿಹಾರಕ್ಕಾಗಿ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.