Friday, May 23, 2025
Google search engine

Homeಅಪರಾಧಹನೂರು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮೂರ್ತಿ ಅಮಾನತ್ತು

ಹನೂರು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮೂರ್ತಿ ಅಮಾನತ್ತು

ಹನೂರು : ಅಕ್ರಮ ಖಾತೆ ಬದಲಾವಣೆ ಸಂಬಂದಿಸಿದಂತೆ ಆರೋಪ ಎದುರಿಸುತ್ತಿರುವ ಹನೂರು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಮೂರ್ತಿ ಅವರನ್ನು ಅಮಾನತ್ತು ಮಾಡಲಾಗಿದೆ. ಈ ಸಂಬಂಧ ಹಲವು ಬಾರಿ ನೋಟೀಸ್ ನೀಡಿದ್ದರೂ ಸಮರ್ಪಕ ಉತ್ತರ ನೀಡದ ಕಾರಣ
ಇಲಾಖೆ ಶಿಸ್ತು ಕ್ರಮಕ್ಕೆ ಮುಂದಾಗಿದೆ. ಮೊದಲ ಬಾರಿ ಇವರನ್ನು ಅಮಾನತ್ತು ಮಾಡಿದ ಬಳಿಕ ಮೂರ್ತಿ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದು ಕೆಲಸದಲ್ಲಿ ಮುಂದುವರಿದಿದ್ದರು.

ನಂತರವೂ ಅದೇ ಪ್ರವೃತ್ತಿಯನ್ನು ಮುಂದುವರೆಸಿ ಹತ್ತರೊಂದಿಗೆ ಹನ್ನೊಂದು ಎಂಬಂತೆ ಇನ್ನೂ ಹಲವಾರು ಅಕ್ರಮಗಳನ್ನು ಎಸಗಿ ಖಾತಾ ಬದಲಾವಣೆಯನ್ನು ದಂಧೆಯನ್ನಾಗಿ ಮಾಡಿಕೊಂಡು ಲಕ್ಷಾಂತರ ರೂಪಾಯಿ ಲೂಟಿ ಮಾಡಿರುವ ಗಂಭೀರ ಆರೋಪಗಳು ಇವರ ವಿರುದ್ಧ ಕೇಳಿ ಬರುತ್ತಿದ್ದು ಅವರ ಅಧಿಕಾರಾವಧಿಯಲ್ಲಿನ ಸಂಪೂರ್ಣ ಕಡತಗಳನ್ನು
ಪರಿಶೀಲಿಸಿದಲ್ಲಿ ಮತ್ತಷ್ಟು ಅಕ್ರಮ ಅವವಹಾರಗಳು ಬಯಲಿಗೆ ಬರುವುದರಲ್ಲಿ ಸಂಶಯವೇ ಇಲ್ಲ ಎನ್ನಲಾಗಿದೆ.

RELATED ARTICLES
- Advertisment -
Google search engine

Most Popular