ಮಂಡ್ಯ: ಮದ್ದೂರು ತಾಲೂಕಿನ ನಿಡಘಟ್ಟ ಗ್ರಾಮದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲೇ ಕಸದ ರಾಶಿ ಕಾಣಸಿಗುತ್ತಿದ್ದು, ಖಾಯಿಲೆ ಹರಡುವ ಭೀತಿ ಎದುರಾಗಿದೆ.
ಪ್ರತಿನಿತ್ಯ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ರಾಜ್ಯಮಟ್ಟದ ಅಧಿಕಾರಿಗಳು ರಾಜಕಾರಣಿಗಳು ಸೇರಿದಂತೆ ಸಾರ್ವಜನಿಕರು ಪ್ರಯಾಣಿಸುತ್ತಾರೆ.

ನಿಡಘಟ್ಟ ಗ್ರಾಮದಲ್ಲೇ ಗ್ರಾಮ ಪಂಚಾಯಿತಿಯ ಕಚೇರಿ ಕೂಡ ಇದೆ ಆದರೆ ಹೆದ್ದಾರಿಯ ಪಕ್ಕದಲ್ಲಿ ಕಸದ ರಾಶಿ ಕೋಳಿ ತ್ಯಾಜ್ಯ ಮದ್ಯದ ಕವರ್ ಗಳು ಹಾಗೂ ಕ್ಲಿನಿಕ್ ನ ಔಷಧ ಸಿರಿಂಜುಗಳು ಹೆದ್ದಾರಿಯಲ್ಲಿ ರಾಶಿ ಹಾಕಿದ್ದಾರೆ.
ಪ್ರತಿನಿತ್ಯ ಹೆದ್ದಾರಿಯಲ್ಲಿ ಓಡಾಡುವ ಸಾರ್ವಜನಿಕರು ಮೂಗು ಮುಚ್ಚಿ ಸಂಚರಿಸುವ ಪರಿಸ್ಥಿತಿ ಬಂದಿದೆ. ಅಲ್ಲದೇ ಖಾಯಿಲೆ ಹರಡುವ ಭೀತಿಯು ಎದುರಾಗಿದೆ.

ಗ್ರಾಮ ಪಂಚಾಯಿತಿ ಅಧಿಕಾರಿಗಳ ದಿವ್ಯ ನಿರ್ಲಕ್ಷದ ಪರಿಣಾಮ ಹೆದ್ದಾರಿಯಲ್ಲಿ ಕಸ ಹಾಕಲಾಗುತ್ತಿದ್ದು, ಇನ್ನು ಮುಂದಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕಸ ವಿಲೇವಾರಿ ಮಾಡಲು ಕ್ರಮವಹಿಸಬೇಕು. ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಬೇಕಾಗಿದೆ.