ರಾಮನಗರ: ಡಾ. ಬಿ.ಆರ್.ಅಂಬೇಡ್ಕರ್‌ಅವರುಅಸ್ಪೃಶ್ಯರ ಪರವಾಗಿಮಾತ್ರ ಹೋರಾಡಿದವರಲ್ಲಈ ದೇಶದ ಸಮಸ್ತ ದಮನಿತರ ಪರವಾಗಿದನಿಯಾಗಿದ್ದರು.ಶ್ರಮಿಕರು ಮತ್ತುಮಹಿಳೆಯರ ಹಕ್ಕುಗಳ ಪರಜಾಗೃತಿ ಮೂಡಿಸಿದರು ಎಂದುಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಬಾಬು ಟಿ.ಜಿಅವರು ತಿಳಿಸಿದರು.
ಮಾಗಡಿ ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆಕಾಲೇಜಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿಇಲಾಖೆಯ ವಿಶೇಷ ಘಟಕಯೋಜನೆಯಡಿ ಆಯೋಜಿಸಲಾಗಿದ್ದ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಓದು ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಡಾ. ಬಿ.ಆರ್.ಅಂಬೇಡ್ಕರ್‌ಅವರು ಸಮಾನತೆಯ ಆಶಯಗಳನ್ನು ಒಳಗೊಂಡ ಸಂವಿಧಾನವನ್ನುಕೊಟ್ಟವರು. ವಿದ್ಯಾರ್ಥಿಗಳುಅಂಬೇಡ್ಕರ್‌ಅವರ ಬದುಕು ಬರಹಗಳನ್ನು ಹಾಗೂ ಸಂವಿಧಾನವನ್ನು ಕಡ್ಡಾಯವಾಗಿ ಓದಬೇಕು ಎಂದರು.
ಕಾಲೇಜಿನ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂಚಾಲಕ ಪ್ರೊ.ಶೀಧರ್ ಅವರು ಮಾತನಾಡಿ, ಅಸಮಾನತೆಯನ್ನು ಉಸಿರಾಡುತ್ತಿರುವ ಈ ನಾಡಿಗೆ ಸ್ವಾಭಿಮಾನದ ಗಂಧವೆರೆಸಿದ ಅಂಬೇಡ್ಕರ್‌ಅವರುಪ್ರತೀಜೀವಿಗೂಘನತೆಯಿದೆ, ಬದುಕುವಹಕ್ಕಿದೆಎಂದು ಬುದ್ಧನಲ್ಲಿಜೀವಕಾರುಣ್ಯವನ್ನುಕಂಡವರು.ಸಂವಿಧಾನವೆಂಬ ಮನುಷ್ಯನಉಳಿವಿನ ರೂಪಕದ ಮೂಲಕ, ಶಿಕ್ಷಣ, ಸಂಘಟನೆ ಮತ್ತು ಹೊರಾಟದಮೂಲಕ ಬಹುಜನರಿಗೆವಿಮೋಚನೆಯಮಾರ್ಗತೋರಿದಅಂಬೇಡ್ಕರ್ ಸದ್ಯ ಮತ್ತು ಶಾಶ್ವತವಾಗಿ ಸದಾ ನಮಗೆ ಪ್ರಸ್ತುತರಾಗುತ್ತಾರೆಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಆಶುಭಾಷಣದ ಸ್ಪರ್ಧೆಏರ್ಪಡಿಸಲಾಗಿತ್ತು.ಈ ಸ್ಪರ್ಧೆಯಲ್ಲಿನಿತಿ ರ್‌ಆರ್.(ಪ್ರಥಮ), ರುಚಿತಾ (ದ್ವಿತೀಯ), ಚಂದನ್ ಬಿ.ಆರ್ (ತೃತೀಯ), ಮದನ್ (ಸಮಾಧಾನಕರ), ಬಹುಮಾನಗಳಿಸಿದರು.ವಿಜೇತರಿಗೆ ಅಂಬೇಡ್ಕರ್ ಕೃತಿಗಳು ಮತ್ತು ಪ್ರಶಸ್ತಿ ಪತ್ರ ನೀಡಿಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದಪ್ರೊ.ರಾಜಣ್ಣ ಡಿ.,ಪ್ರಾಧ್ಯಾಪಕರು ಹಾಗೂ ಇತರರು ಉಪಸ್ಥಿತರಿದ್ದರು.