Wednesday, May 21, 2025
Google search engine

Homeರಾಜ್ಯಸುದ್ದಿಜಾಲಜಿ.ಪಂ. ಮಾಜಿ ಅಧ್ಯಕ್ಷ ಕೆ.ಪಿ.ಸಿ.ಸಿ. ಸದಸ್ಯ ಮರಿಗೌಡ ಹುಟ್ಟುಹಬ್ಬದ ಅಂಗವಾಗಿ ವಿವಿಧ ಸೇವಾ...

ಜಿ.ಪಂ. ಮಾಜಿ ಅಧ್ಯಕ್ಷ ಕೆ.ಪಿ.ಸಿ.ಸಿ. ಸದಸ್ಯ ಮರಿಗೌಡ ಹುಟ್ಟುಹಬ್ಬದ ಅಂಗವಾಗಿ ವಿವಿಧ ಸೇವಾ ಕಾರ್ಯಕ್ರಮ

ಮೈಸೂರು: ಜಿ.ಪಂ. ಮಾಜಿ ಅಧ್ಯಕ್ಷ ಕೆ.ಪಿ.ಸಿ.ಸಿ. ಸದಸ್ಯ ಮರಿಗೌಡ ಹುಟ್ಟುಹಬ್ಬದ ಅಂಗವಾಗಿ ವಿವಿಧ ಸೇವಾ ಕಾರ್ಯಕ್ರಮ ನಾಳೆ ಡಿ.೨೦ ಬುಧವಾರದಂದು ಬೆಳಿಗ್ಗೆ 8 ಗಂಟೆಗೆ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವರು. 8.30ಕ್ಕೆ ಜಯನಗರದಲ್ಲಿರುವ ಛಾಯಾದೇವಿ ಆಶ್ರಮದಲ್ಲಿ ಮಕ್ಕಳಿಗೆ ತಿಂಡಿ ಹಾಗೂ ಹಣ್ಣು ವಿತರಣೆ ಕಾರ್ಯಕ್ರಮ “ಶೇಖರ್”ರವರಿಂದ 9 ಗಂಟೆಗೆ ಶ್ರೀರಾಂಪುರದಲ್ಲಿರುವ ಶ್ರೀ ನವ ಚೇತನ ಬಸವೇಶ್ವರ ಬುದ್ಧಿಮಾಂದ್ಯ ಮಕ್ಕಳಿಗೆ “ಕೇರಗಳ್ಳಿ ಬಸವೇಗೌಡರ” ವತಿಯಿಂದ ತಿಂಡಿ ವಿತರಣಾ ಕಾರ್ಯಕ್ರಮ.

೧೦ ಗಂಟೆಗೆ ರಮಾಬಾಯಿ ಅವರಿಗೆ “ಶಿವಕುಮಾರ್”ಹಾಗೂ “ನಾರಾಯಣ” ಅವರ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ೧೦.೩೦ಕ್ಕೆ ಕೋಟೆಹುಂಡಿ ಗ್ರಾಮಸ್ಥರಿಂದ ಹುಟ್ಟು ಹಬ್ಬದ ಆಚರಣೆ ಸನ್ಮಾನ ಕಾರ್ಯಕ್ರಮ. ೧೧.೩೦ಕ್ಕೆ ಶ್ರೀರಾಂಪುರ ಪಟ್ಟಣ ಪಂಚಾಯಿತಿ ಪೌರಕಾರ್ಮಿಕರಿಗೆ “ಲಕ್ಷ್ಮಣ್ ಪ್ರಭು” ಅವರಿಂದ ಬಟ್ಟೆ ವಿತರಣೆ, ಮಧ್ಯಾಹ್ನ ೧೨.೩೦ಕ್ಕೆ ಶ್ರೀರಾಂಪುರದ ಅಶ್ವಿನಿ ಕಲ್ಯಾಣ ಮಂಟಪದ ವೇದಿಕೆ ಕಾರ್ಯಕ್ರಮ ಮಧ್ಯಾಹ್ನ ೧.೩೦ಕ್ಕೆ – ಬಂಬೂ ಬಜಾರಿನಲ್ಲಿರುವ “ಕಿವುಡು ಮೂಗರ” ಅಂಗವಿಕಲ ಶಾಲಾ ಮಕ್ಕಳಿಗೆ ಊಟದ ವ್ಯವಸ್ಥೆ” ಅರಸಿನಕೆರೆ ಸ್ವಾಮಿ, “ಹೆಚ್.ಮಹಾದೇವ ” ಅವರಿಂದ. ಮಧ್ಯಾಹ್ನ 2.30 ಮಹಿಳೆಯರಿಗೆ ಭರತ್‌ಗಾಗಿ “ಅಜ್ಮಲ್” ಅವರಿಂದ ಬಡ ಸೀರೆ ವಿತರಣೆ, ಸಂಜೆ 5:30 ಕ್ಕೆ ಇಲವಾಲದಲ್ಲಿ ಅಭಿನಂದನಾ ಕಾರ್ಯಕ್ರಮ, ಸಂಜೆ 7:00 ಕ್ಕೆ ರಮಾಬಾಯಿ ಅವರಿಗೆ “ಸಿದ್ದರಾಮ “ಅವರಿಂದ ಸನ್ಮಾನ ಕಾರ್ಯಕ್ರಮ ರಾತ್ರಿ 8 .000 ಗಂಟೆಗೆ ಕೆ.ಹೆಚ್. ಬಿ. ಬಡಾವಣೆಯಲ್ಲಿ ಕನಕ ಜಯಂತಿ ಕಾರ್ಯಕ್ರಮದಲ್ಲಿ ಅಭಿನಂದನಾ ಸಮಾರಂಭ ನಡೆಯಲಿದೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಕುಮಾರ್, ಮರೀಗೌಡ ಅಭಿಮಾನಿ ಸಂಘದ ಅಧ್ಯಕ್ಷ ಧನಗಳ್ಳಿ ಬಸವರಾಜು, ಉಪಾಧ್ಯಕ್ಷ ಶಿವಣ್ಣ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular