Wednesday, May 21, 2025
Google search engine

HomeUncategorizedರಾಷ್ಟ್ರೀಯಅಯೋಧ್ಯೆ ರಾಮಮಂದಿರ:ಭಕ್ತನಿಂದ 108 ಅಡಿ ಉದ್ದದ ಅಗರಬತ್ತಿ ತಯಾರಿ

ಅಯೋಧ್ಯೆ ರಾಮಮಂದಿರ:ಭಕ್ತನಿಂದ 108 ಅಡಿ ಉದ್ದದ ಅಗರಬತ್ತಿ ತಯಾರಿ

ಗುಜರಾತ್: ಈಗಾಗಲೇ ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ, ಭಕ್ತರು ನಾನಾ ರೀತಿಯಲ್ಲಿ ಸೇವೆಗಳನ್ನು ನೀಡಲು ಮುಂದಾಗಿದ್ದಾರೆ. ಅದರಂತೆ ಗುಜರಾತ್ ನ ವಡೋದರಾದ ಭಕ್ತನೋರ್ವ ಅಯೋಧ್ಯಾ ರಾಮ ಮಂದಿರಕ್ಕೆ ಸುಮಾರು 108 ಅಡಿ ಉದ್ದದ ಅಗರಬತ್ತಿಯೊಂದನ್ನು ನೀಡಲು ಮುಂದಾಗಿದ್ದಾರೆ.

ವಡೋದರದ ತರ್ಸಾಲಿ ಪ್ರದೇಶದಲ್ಲಿ ನೆಲೆಸಿರುವ ವಿಹಾಭಾಯಿ ಭರ್ವಾಡ್ ಕಳೆದ ಆರು ತಿಂಗಳಿಂದ ಏಕಾಂಗಿಯಾಗಿ ಈ ಬೃಹತ್ ಗಾತ್ರದ ಅಗರಬತ್ತಿಯನ್ನು ರಚಿಸುತ್ತಿದ್ದಾರೆ.

ಬೃಹತ್ ಗಾತ್ರದ ಅಗರಬತ್ತಿಯು 3,000 ಕೆಜಿ ಗಿರ್ ಹಸುವಿನ ಸಗಣಿ, 91 ಕೆಜಿ ಗಿರ್ ಹಸುವಿನ ತುಪ್ಪ, 280 ಕೆಜಿ ದೇವದಾರ್ ಮರದ ಪುಡಿ, 376 ಕೆಜಿ ಗುಗಲ್, 280 ಕೆಜಿ ತಾಲ್, 280 ಕೆಜಿ ಜಾವ್, 370 ಕೆಜಿ ಪುಡಿ ಮಾಡಿದ ಕೊಪ್ರಾ ಮರದ ಪುಡಿಯನ್ನು ಸೇರಿಸಿ 108 ಅಡಿ ಉದ್ದದ ಬೃಹತ್ ಗಾತ್ರದ ಊದುಬತ್ತಿಯನ್ನು ನಿರ್ಮಿಸಿದ್ದು ಇದರ ಒಟ್ಟು ತೂಕ 3,500 ಕೆಜಿ ಹೊಂದಿದೆ ಎಂದು ಹೇಳಲಾಗಿದೆ.

ರಾಮ ಮಂದಿರದ ಉದ್ಘಾಟನೆಗೂ ಮುನ್ನ ಊದುಬತ್ತಿಯನ್ನು ರಸ್ತೆ ಮಾರ್ಗದ ಮೂಲಕ ಅಯೋಧ್ಯೆಗೆ ಸಾಗಿಸಲಾಗುವುದು ಎಂದು ಹೇಳಿದ್ದಾರೆ.

ಗುಜರಾತ್‌ನ ವಡೋದರಾದಲ್ಲಿ 108 ಅಡಿ ಉದ್ದದ ಅಗರಬತ್ತಿಯನ್ನು ಸಿದ್ಧಪಡಿಸಲಾಗುತ್ತಿದ್ದು, ಇದನ್ನು ಜನವರಿ 22 ರಂದು ನಡೆಯಲಿರುವ ರಾಮಮಂದಿರ ‘ಪ್ರಾಣ ಪ್ರತಿಷ್ಠಾ’ಕ್ಕೆ ಮುಂಚಿತವಾಗಿ ಅಯೋಧ್ಯೆಗೆ ಕಳುಹಿಸಲಾಗುವುದು ಎಂದು ಹೇಳಲಾಗಿದೆ.

RELATED ARTICLES
- Advertisment -
Google search engine

Most Popular