ತೀರ್ಥಹಳ್ಳಿ: ಶನಿವಾರ ಬೆಳಗಿನ ಜಾವ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮನೆಗೆ ಡಿಕ್ಕಿ ಹೊಡೆದಿರುವ ಘಟನೆ ಪಟ್ಟಣದ ಭಾರತೀಪುರ ತಿರುವಿನಲ್ಲಿ ನೆಡೆದಿದೆ.
ಇಬ್ಬರು ಇಂಜಿನಿಯರ್ ಗಳು ತೀರ್ಥಹಳ್ಳಿಯಿಂದ ಶಿವಮೊಗ್ಗ ಕಡೆ ಹೋಗುತ್ತಿದ್ದ ಸಂದರ್ಭದಲ್ಲಿ ಭಾರತೀಪುರ ತಿರುವಿನಲ್ಲಿ ನಿಯಂತ್ರಣ ತಪ್ಪಿ ಲಕ್ಷ್ಮಣ ಭಟ್ ಎಂಬುವರ ಮನೆಯ ಮುಂಭಾಗದ ಹಂಚಿಗೆ ಡಿಕ್ಕಿ ಹೊಡೆದು ಮನೆಯ ಅಂಗಳಕ್ಕೆ ಮಹೇಂದ್ರ ನೆಕ್ಸ 300 ಕಾರು ಪಲ್ಟಿ ಹೊಡೆದಿದೆ.
ಶನಿವಾರ ಬೆಳಗಿನ ಜಾವ ಸುಮಾರು 3 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದ್ದು, ನಿದ್ದೆ ಮಂಪರಿನಿಂದ ಈ ಘಟನೆ ನೆಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಕಾರಿನಲ್ಲಿದ್ದ ಇಬ್ಬರಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.