ತುಮಕೂರು: ಫೈನಾನ್ಸ್ ನೌಕರರ ಕಿರುಕಳಕ್ಕೆ ಮನನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಮದ್ಲೇಹಳ್ಳಿಯಲ್ಲಿ ನಡೆದಿದೆ.
ಪುಪ್ಪಲತಾ(36) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ತಿಪಟೂರು ನಗರದಲ್ಲಿರುವ ಬಜಾಜ್ ಫೈನಾನ್ಸ್ ಕಂಪನಿಯಿಂದ ಪುಷ್ಪಲತಾ 90,000 ಸಾಲ ಪಡೆದಿದ್ದರು. ಕೊನೆಯ ಕಂತು ಕಟ್ಟಬೇಕಿತ್ತು.

ಒಂದು ಕಂತಿಗಾಗಿ ಫೈನಾನ್ಸ್ ನೌಕರರು ಮನೆಯ ಮುಂದೆ ಬಂದು ಗಲಾಟೆ ಮಾಡಿದ್ದಾರೆ. ಹರ್ಷವರ್ಧನ್ ಮತ್ತು ಮತ್ತೊಬ್ಬ ವ್ಯಕ್ತಿಯಿಂದ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದ್ದು, ಜೀವ ಹೋಗಿದೆ ಎಂದರೂ ಹಣವೇ ಮುಖ್ಯ ಎಂದು ಫೈನಾನ್ಸ್ ನೌಕರರು ಮಾತನಾಡುತ್ತಿದ್ದಾರೆ.
ಸತ್ರೆ ಸಾಯ್ತಾರೆ, ನಮ್ಮ ಹಣ ಕೊಡಿ ಎಂದು ಪೈನಾನ್ಸ್ ನೌಕರರು ಆವಾಜ್ ಹಾಕಿದ್ದು, ಪೈನಾನ್ಸ್ ನೌಕರ ಹರ್ಷವರ್ಧನ್ ನ ದುರಹಂಕಾರದ ಮಾತುಗಳಿಗೆ ಸ್ಥಳೀಯರು ಸಿಟ್ಟಾಗಿದ್ದಾರೆ.
ಕಿಬ್ಬನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ ಪತಿ ಕೃಷ್ಣಕುಮಾರ್ ದೂರು ನೀಡಿದ್ದು, ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.