ಗುಂಡ್ಲುಪೇಟೆ: ಶಾಸಕ ಗಣೇಶ್ ಪ್ರಸಾದ್ ಅವರನ್ನು ಅವರ ಮನೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಹಾಗೂ ಮುಂಬರುವ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಯು ಆಗಿರುವ ಕಾಂಗ್ರೆಸ್ಸಿನ ಹಿರಿಯ ಮುಖಂಡರಾದ ಗುರುಪಾದ ಸ್ವಾಮಿಯವರು ಭೇಟಿಯಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದರು.
ಇವರ ಜೊತೆಯಲ್ಲಿ ಕೆಪಿಸಿಸಿ ಸಂಯೋಜಕರಾದ ಎನ್ ಎಸ್ ರಾಜೇಂದ್ರ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅಭಿ, ಮುಖಂಡರಾದ ವೈ ಜೆ ನವೀನ್ ಕುಮಾರ್ ಮುಂತಾದವರು ಜೊತೆಯಲಿದ್ದರು.