Friday, May 23, 2025
Google search engine

Homeರಾಜ್ಯಸುದ್ದಿಜಾಲರಾಜ್ಯಮಟ್ಟದಲ್ಲಿ ಫ್ರೂಟ್ಸ್ ನೋಂದಣಿ: ಬಳ್ಳಾರಿ ಜಿಲ್ಲೆ ಅಗ್ರಸ್ಥಾನ

ರಾಜ್ಯಮಟ್ಟದಲ್ಲಿ ಫ್ರೂಟ್ಸ್ ನೋಂದಣಿ: ಬಳ್ಳಾರಿ ಜಿಲ್ಲೆ ಅಗ್ರಸ್ಥಾನ

ಬಳ್ಳಾರಿ: ರೈತರಿಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪ್ರೂಟ್ಸ್ ನೋಂದಣಿಯಲ್ಲಿ ಬಳ್ಳಾರಿ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ. ರಾಜ್ಯ ಸರ್ಕಾರ ಈ ಕುರಿತು ಬಿಡುಗಡೆ ಮಾಡಿರುವ ವರದಿಯನ್ನು ನೋಡಿ ಹರ್ಷ ವ್ಯಕ್ತಪಡಿಸಿರುವ ಜಿಲ್ಲಾಧಿಕಾರಿಗಳು ನಮ್ಮ ಜಿಲ್ಲೆ ಇಡೀ ರಾಜ್ಯದಲ್ಲಿಯೇ ಅದ್ವಿತೀಯ ಸಾಧನೆ ಮಾಡಿದೆ. ಕಂದಾಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಬಳ್ಳಾರಿ ಜಿಲ್ಲಾಡಳಿತ ನೀಡಿದ ನಿಗದಿತ ಗುರಿಯನ್ನು ಯಶಸ್ವಿಯಾಗಿ ಸಾಧಿಸಿದ ಮೊದಲ ಜಿಲ್ಲೆಯಾಗಿದೆ ಎಂದು ತಿಳಿಸಿದ್ದಾರೆ.

ಬರಗಾಲ ಹಿನ್ನಲೆಯಲ್ಲಿ ರೈತರು ತಮ್ಮ ಬೆಳೆ ನಷ್ಟ ಪರಿಹಾರ ಪಡೆಯಲು ಮತ್ತು ರಾಜ್ಯ ಸರ್ಕಾರವು ಫ್ರೂಟ್ಸ್ ತಂತ್ರಾಂಶದ ಮೂಲಕ ಪರಿಹಾರ ಒದಗಿಸಲು ನೋಂದಣಿಯು ಕಡ್ಡಾಯವಾಗಿದ್ದು, ರೈತರಿಗೆ ಜಾಗೃತಿ ಮೂಡಿಸಿ, ಫ್ರೂಟ್ಸ್ ನೋಂದಣಿಯಲ್ಲೇ ಬಳ್ಳಾರಿ ಜಿಲ್ಲೆಯು ಅಗ್ರಸ್ಥಾನದಲ್ಲಿರುವುದು ವಿಶೇಷವಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಂದಾಯ ಇಲಾಖೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ರೈತರಿಗೆ ನಿರಂತರ ಅರಿವು ಮತ್ತು ಜಾಗೃತಿಯಿಂದ ಈ ಕಾರ್ಯವು ಯಶಸ್ವಿಗೊಂಡಿದೆ ಎಂದು ತಿಳಿಸಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಭೂಮಿ ತಂತ್ರಾಂಶದಲ್ಲಿ 456020 ಪ್ಲಾಟ್‍ಗಳಿವೆ. ಕೃಷಿಯೇತರ ಭೂಮಿ 58310 ಪ್ಲಾಟ್‍ಗಳು, ಖಾಸಗಿ ಭೂಮಿ 397918 ಪ್ಲಾಟ್‍ಗಳು, ಬೆಳೆ ಸಮೀಕ್ಷೆಗೆ ಒಳಪಟ್ಟ ಭೂಮಿ 47553 ಪ್ಲಾಟ್‍ಗಳು, ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಲಾದ ಭೂಮಿ 350365 ಪ್ಲಾಟ್‍ಗಳು, ಇದಕ್ಕೂ ಮೊದಲು ನೋಂದಣಿಯಾದ ಭೂಮಿ 294598 ಪ್ಲಾಟ್‍ಗಳು ಮತ್ತು 55767 ಪ್ಲಾಟ್‍ಗಳು ಬಾಕಿ ಇವೆ. ಒಟ್ಟು ಶೇಕಡ 84.08 ಪ್ರತಿಶತ ಸಾಧನೆ ಮಾಡುವ ಮೂಲಕ ಪ್ರಥಮ ಸ್ಥಾನದಲ್ಲಿದೆ.

ಫ್ರೂಟ್ಸ್ ನೋಂದಣಿಗೆ ಸಂಬಂಧಪಟ್ಟಂತೆ ಜಿಲ್ಲೆಯ ರೈತರಿಂದ ಉತ್ತಮವಾದ ಸ್ಪಂದನೆ ದೊರೆತಿದೆ. ನಿಗದಿತ ಗುರಿ ತಲುಪಿರುವುದು. ನಿಜಕ್ಕೂ ಸಂತೋಷದ ಸಂಗತಿ. ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಅಭಿನಂದನೆಗಳು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular