Saturday, May 24, 2025
Google search engine

Homeಸ್ಥಳೀಯಮಂತ್ರಾಕ್ಷತೆ, ರಾಮಮಂದಿರದ ಭಾವಚಿತ್ರ ಪ್ರತಿ ಮನೆಗೂ ತಲುಪಿಸುವ ಅಭಿಯಾನಕ್ಕೆ ಚಾಲನೆ

ಮಂತ್ರಾಕ್ಷತೆ, ರಾಮಮಂದಿರದ ಭಾವಚಿತ್ರ ಪ್ರತಿ ಮನೆಗೂ ತಲುಪಿಸುವ ಅಭಿಯಾನಕ್ಕೆ ಚಾಲನೆ

ಎಚ್.ಡಿ.ಕೋಟೆ: ಅಯೋಧ್ಯೆಯಲ್ಲಿ ಜನವರಿ 22 ರಂದು ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಆಗಲಿದೆ ಎಂದು ರಾಷ್ಟ್ರೀಯ ಬಜರಂಗದಳದ ಸಂಚಾಲಕ ಸೂರ್ಯನಾರಾಯಣ್ ತಿಳಿಸಿದರು.

ಪಟ್ಟಣದ ಹನುಮಂತ ದೇವಸ್ಥಾನದಲ್ಲಿ ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ ಹಾಗೂ ರಾಮಮಂದಿರದ ಭಾವಚಿತ್ರ ವಿತರಿಸುವ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

ಮಂತ್ರಾಕ್ಷತೆ, ರಾಮಮಂದಿರದ ಭಾವಚಿತ್ರಗಳನ್ನು ಪ್ರತಿ ಮನೆಗೂ ತಲುಪಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಭಾರತದ ಹಳ್ಳಿ ಹಳ್ಳಿಗಳಲ್ಲಿ ರಾಮಮಂದಿರವಿದೆ ಆದರೆ ರಾಮ ಹುಟ್ಟಿದ ಜನ್ಮಸ್ಥಳದಲ್ಲಿ ಮಸೀದಿ ಇತ್ತು ಹಾಗಾಗಿ ಅಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂಬ ಕನಸು ಭಾರತದ ಹಿಂದುಗಳ ಸಂಕಲ್ಪವಾಗಿತ್ತು ಎಂದರು. 

ಯಾವುದೆ ಪಕ್ಷ ಅಥವಾ ಧರ್ಮದ  ವಿರುದ್ಧವೂ ಅಲ್ಲ ಯಾರ ಪರವು ಅಲ್ಲ,  ನಮ್ಮ ಸ್ವಾಭಿಮಾನ, ಆತ್ಮಗೌರವದ ಸಂಕೇತವಾಗಿದೆ, ಹಿಂದೂ ಧರ್ಮದಲ್ಲಿ ಸಾಕಷ್ಟು ನ್ಯೂನತೆಗಳಿದ್ದು, ಎಲ್ಲರನ್ನು ಒಳಗೊಳ್ಳುವ ಮೂಲಕ, ಧರ್ಮಾದ ಆಚಾರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಜನವರಿ 1 ರಿಂದ ಜನವರಿ 15 ರವರೆಗೆ ಶ್ರೀರಾಮ ಮಂದಿರ ಮಹಾ ಸಂಪರ್ಕ ಅಭಿಯಾನ ದೇಶದಾದ್ಯಂತ ಆರಂಭವಾಗಿದೆ, ರಾಮ ಭಕ್ತರು ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆಯನ್ನು ಪ್ರತಿ ಹಿಂದೂಗಳ ಮನೆಗಳಿಗೆ ಹಾಗೂ ರಾಮಭಕ್ತರ ಮನೆಗಳಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.

ಹನುಮ ಸೇವಾ ಸಮಿತಿ ಅಧ್ಯಕ್ಷ ನಂದಿನಿಶ್ರೀಕಾಂತ್, ಜಯಂತ್, ವೀರಪ್ಪ, ಡಿಶ್ ದೇವರಾಜು, ಪೂರ್ಣೇಶ್, ನಂದೀಶ್, ರಾಮಣ್ಣ, ಬಿಡಗಲರಾಜು, ಚಂದ್ರ ಮೌಳಿ, ಮುತ್ತಣ್ಣ, ನಾರಯಣ್ ಲಾಲ್, ಪ್ರಸಾದಿ, ನಟರಾಜು, ವಿಶ್ವಹಿಂದು ಪರಿಷತ್ ಮಹದೇವಪ್ಪ, ಸುಧಾಕರ್, ಪ್ರಕಾಶ್, ಪ್ರಮೋದ್, ಶಿವರಾಜು, ಪ್ರಶಾಂತ್, ಸುರೇಶ್, ಮಹೇಶ್, ರಾಘವೇಂದ್ರ, ರೇವಣ್ಣ ಇದ್ದರು.

RELATED ARTICLES
- Advertisment -
Google search engine

Most Popular