ಪಿರಿಯಾಪಟ್ಟಣ: ಪಟ್ಟಣದ ಗ್ರೀನ್ ಕಿಡ್ಸ್ ನೃತ್ಯ ಶಾಲೆ ಸತತ ಐದನೇ ಬಾರಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಹಿರಿಮೆಗೆ ಪಾತ್ರವಾಗಿದೆ.
ಮಂಡ್ಯದಲ್ಲಿ ನಡೆದ ರಾಜ್ಯಮಟ್ಟದ ಕರ್ನಾಟಕ ಸ್ಪೋರ್ಟ್ಸ್ ಡ್ಯಾನ್ಸ್ ಅಸೋಸಿಯೇಷನ್ ನೃತ್ಯ ಸ್ಪರ್ಧೆಯಲ್ಲಿ ಪಿರಿಯಾಪಟ್ಟಣದ ಗ್ರೀನ್ ಕಿಡ್ಸ್ ಡಾನ್ಸ್ ಸ್ಕೂಲ್ ವಿದ್ಯಾರ್ಥಿಗಳು 2 ಚಿನ್ನ 2 ಬೆಳ್ಳಿ ಹಾಗೂ 3 ಕಂಚಿನ ಪದಕ ಪಡೆಯುವ ಮೂಲಕ ಫೋಕ್ ಡ್ಯಾನ್ಸ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಫೆಬ್ರವರಿಯಲ್ಲಿ ಕರ್ನಾಟಕ ಸ್ಪೋರ್ಟ್ಸ್ ಡಾನ್ಸ್ ಅಸೋಸಿಯೇಷನ್ ವತಿಯಿಂದ ನಡೆಯಲಿರುವ ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಈ ಹಿಂದೆ ಗೋವಾ, ಆಂದ್ರಪ್ರದೇಶ, ಮಹಾರಾಷ್ಟ್ರ ಮತ್ತು ವಿಶಾಖಪಟ್ಟಣದಲ್ಲಿ ನಡೆದ ರಾಷ್ಟ್ರಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿದ್ದರು.
ಗ್ರೀನ್ ಕಿಡ್ಸ್ ಸಂಸ್ಥೆ ಗೌರವಾಧ್ಯಕ್ಷ ಎನ್.ಎಲ್ ಗಿರೀಶ್ ಸೇರಿದಂತೆ ತಾಲೂಕಿನ ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಸಂಸ್ಥೆಯ ನೃತ್ಯ ನಿರ್ದೇಶಕ ಅಂಬಾರಿ ಪರಮೇಶ್ ಹಾಗೂ ವಿದ್ಯಾರ್ಥಿಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿ ಶುಭಕೋರಿದರು.
ಸ್ಪರ್ಧೆಯಲ್ಲಿ ಸ್ಪೋರ್ಟ್ಸ್ ಡಾನ್ಸ್ ಅಸೋಸಿಯೇಷನ್ ಸಿಇಒ ರವಿ, ಟೆಕ್ನಿಕಲ್ ಚೇರ್ಮನ್ ವಿನೋದ್ ಕರ್ಕರಾ, ಮಂಡ್ಯ ಸರ್ಕಲ್ ಇನ್ಸ್ಪೆಕ್ಟರ್ ವಿನೋದ್, ವಿವಿಧ ನೃತ್ಯ ಶಾಲೆಗಳಿಂದ ಆಗಮಿಸಿದ್ದ ಸ್ಪರ್ಧಿಗಳು ಹಾಗು ಸಂಯೋಜಕರು ಮತ್ತು ಪೋಷಕರು ಇದ್ದರು.