ಮಂಡ್ಯ: ಅಯೋಧ್ಯೆಯಲ್ಲಿ ಜನವರಿ 22 ರಂದು ಶ್ರೀ ರಾಮನ ಪ್ರಾಣ ಪ್ರತಿಷ್ಠಾನ ಹಿನ್ನಲೆ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಮನೆ ಮನೆಗೆ ಮಂತ್ರಾಕ್ಷತೆ ವಿತರಿಸಲಾಗುತ್ತಿದೆ.
ನಗರದ ಚಾಮುಂಡೇಶ್ವರಿ ಬಡಾವಣೆಯಲ್ಲಿ ಮನೆ ಮನೆಗೆ ಮಂಡ್ಯ ನಗರ ಘಟಕದ ಮಾಜಿ ಅಧ್ಯಕ್ಷ ಬಿಜೆಪಿ ಮುಖಂಡ ಬೇಕರಿ ಅರವಿಂದ್ ನೇತೃತ್ವದಲ್ಲಿ ಮಂತ್ರಾಕ್ಷತೆ ವಿತರಿಸಲಾಯಿತು.

3 ಮಕ್ಕಳಿಗೆ ರಾಮ,ಲಕ್ಷ್ಮಣ, ಸೀತಾಮಾತೆಯ ವೇಷ ಧರಿಸಿ ಮನೆಮನೆಗೆ ತೆರಳಿ ಮಂತ್ರಾಕ್ಷತೆ, ಶ್ರೀರಾಮ ಧ್ವಜ ವಿತರಿಸಿ ಜ.22 ರಂದು ಮನೆ ಮೇಲೆ ಧ್ವಜ ಹಾರಿಸಿ, ದೀಪ ಬೆಳಗಿಸುವಂತೆ ಮನವಿ ಮಾಡಲಾಯಿತು.