ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ದಕ್ಷಿಣ ಭಾರತದಲ್ಲಿ ಸುಗ್ಗಿಯ ನಂತರ ನಡೆಯುವ ಇತಿಹಾಸ ಪ್ರಸಿದ್ದ ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯ ಶ್ರೀರಾಮ ದೇವರ ಬ್ರಹ್ಮ ರಥೋತ್ಸವ ಮಂಗಳವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿದ ಜರುಗಿತು.
ಬೆಳಿಗ್ಗೆ ೧೧.೩೦ರಲ್ಲಿ ಆದಿ ಚುಂಚನಗಿರಿ ಮಠದ ಮೈಸೂರು ಶಾಖಾ ಮಠದ ಸೋಮನಾಥ ಶ್ರೀ, ಗಾವಡಗೆರೆ ಮಠದ ನಟರಾಜ ಸ್ವಾಮಿಜಿ ಮತ್ತು ಶಾಸಕ ಡಿ.ರವಿಶಂಕರ್ ಅವರು ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನೆರೆದಿದ್ದ ಭಕ್ತರು ಶ್ರೀರಾಮ ದೇವರಿಗೆ ಜಯಕಾರ ಕೂಗಿ ರಥವನ್ನು ದೇವಾಲಯದ ಸುತ್ತ ಒಂದು ಸುತ್ತು ಎಳೆದಾಗ ಈ ಅಭೂತಪೂರ್ವ ದೃಶ್ಯವನ್ನು ಕಣ್ತುಂಬಿಕೊಂಡ ಭಕ್ತ ಸಾಗರ ಭಾವ ಪರವಶವಾಯಿತು.
ರಥವು ದೇವಾಲಯದ ಸುತ್ತ ಸುತ್ತುವಾಗ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಮತ್ತು ಸ್ಥಳೀಯ ಭಕ್ತಗಣ ದೇವರಿಗೆ ಬಾಳೆಹಣ್ಣು ಧವನ ಎಸೆದು ತಮ್ಮ ಭಕ್ತಿ ಸಮರ್ಪಿಸಿದರಲ್ಲದೆ ಸರತಿ ಸಾಲಿನಲ್ಲಿ ನಿಂತು ಸೀತಾ ಸಮೇತ ಶ್ರೀರಾಮ ಮತ್ತು ಲಕ್ಷಣ ದೇವರ ದರ್ಶನ ಪಡೆದರು.
ರಥೋತ್ಸವಕ್ಕೆ ಬಂದಿದ್ದವರಿಗೆ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶಾಸಕ ಡಿ.ರವಿಶಂಕರ್ ಅವರು ಪ್ರಸಾದದ ವ್ಯವಸ್ಥೆ ದೇವಾಲಯಕ್ಕೆ ಆಗಮಿಸಿದ್ದವರಿಗೆ ಲಾಡು ವಿತರಣೆ ಮಾಡಿದರೇ ಯುವ ಜೆಡಿಎಸ್ ಮುಖಂಡ ಹಳಿಯೂರು ಮಧುಚಂದ್ರ ಮತ್ತು ಉದ್ಯಮಿ ಹೆಚ್.ಕೆ.ಶ್ರೀಧರ್, ಕೆ.ಆರ್.ನಗರ ರೋಟರಿ ಮತ್ತು ಕರ್ನಾಟಕ ರಾಜ್ಯ ಗ್ರಾ.ಪಂ.ನ ಕ್ಲರ್ಕ್ ಕಂ ಡಿಇಓ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಭಕ್ತಾಧಿಗಳಿಗೆ ಮಜ್ಜಿಗೆ -ಪಾನಕ ವಿತರಿಣೆ ಮಾಡಿದರು.

ಜಾತ್ರೆಗೆ ಬಂದ ಭಕ್ತರನೇಕರು ದೇವಾಲಯದ ಆವರಣದಲ್ಲಿ ಅಡುಗೆ ಮಾಡಿ ಭಕ್ತರಿಗೆೆ ಉಣ ಬಡಿಸಿ ತಮ್ಮ ಹರಕೆ ತೀರಿಸಿದರು ಇದರ ಜತೆಗೆ ಬಸವನ ವೃತ್ತದಿಂದ ಶ್ರೀರಾಮ ದೇವಾಲಯದವರೆಗೆ ರಸ್ತೆಯ ಎರಡೂ ಬದಿಯಲ್ಲಿ ಹಾಕಿರುವ ಸಿಹಿತಿಂಡಿ ಮತ್ತು ವಿವಿದ ಆಟಿಕೆಯ ಸಾಮಾನುಗಳ ಅಂಗಡಿಗಳು ಜನರ ಮನ ಸೆಳೆದವು ಅಲ್ಲದೇ ಭರ್ಜರಿ ವ್ಯಾಪಾರ ವಹಿವಾಟು ನಡೆಸಿದರು
ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡ ದೊಡ್ಡ ಸ್ವಾಮೇಗೌಡ, ವನಜಾಕ್ಷಮ್ಮ, ಸುನೀತಾರವಿಶಂಕರ್, ಕುಪ್ಪೆ ಗ್ರಾ.ಪಂ.ಅದ್ಯಕ್ಷೆ ಗೀತಾ, ಉಪಾಧ್ಯಕ್ಷೆ ಗೀತಾ, ಮೈಮಲ್ ಮಾಜಿಅಧ್ಯಕ್ಷ ಎ.ಟಿ.ಸೋಮಶೇಖರ್, ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಳ್ಳಿ ಸೋಮು, ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯ ಮಹದೇವ ಸ್ವಾಮಿ, ಮಾಜಿ ಸದಸ್ಯರಾದ ಗೋವಿಂದೇಗೌಡ, ಚಂದ್ರಶೇಖರ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಉದಯಶಂಕರ್, ಮಹದೇವ್, ಕಾಂಗ್ರೇಸ್ ಮುಖಂಡರಾದ ಶ್ರೀರಾಮಪುರ ಆನಂದ್, ಡೇರಿ ಮಾದು, ಎಚ್.ಜೆ.ರಮೇಶ್, ನೂತನ್ ಗೌಡ, ಸರಿತಾಜವರಪ್ಪ, ಉಷಾ ಪ್ರಸನ್ನ, ಹೆಬ್ಬಾಳು ಸೋಮಪ್ಪ, ತಹಸೀಲ್ದಾರ್ ಪೂರ್ಣಿಮಾ, ತಾ.ಪಂ ಇ.ಓ ಹರೀಶ್, ಸಾಲಿಗ್ರಾಮ ತಾಲೂಕು ಶಿರಸ್ತೆದಾರ್ ಮೇಲೂರು ಶಿವಕುಮಾರ್, ಉಪತಹಸೀಲ್ದಾರ್ ಕೆ.ಜೆ.ಶರತ್,ಆರ್.ಐ ಚಿದಾನಂದ್ ,ದೇವಾಲಯದ ಇಓ ಕೆ.ರಘು, ಆರೋಗ್ಯಾಧಿಕಾರಿ ಡಾ.ನಟರಾಜು, ಎಇಇ ಗಳಾದ ಅರ್ಕೇಶಮೂರ್ತಿ, ಹಾರಂಗಿ ಗುರುರಾಜ್, ದೇವಾಲಯದ ಅರ್ಚಕರರಾದ ವಾಸುದೇವನ್, ನಾರಾಯಣ ಅಯ್ಯಂಗಾರ್ ಸೇರಿದಂತೆ ಮತ್ತಿತರರು ಇದ್ದರು. ಮುನ್ನಚ್ಚರಿಕೆಯ ಕ್ರಮವಾಗಿ ಹುಣಸೂರು ಡಿವೈಎಸ್ಪಿ ಗೋಪಾಲ ಕೃಷ್ಣ, ನೇತೃತ್ವದಲ್ಲಿ ಸರ್ಕಲ್ ಇನ್ಸ್ ಪೆಟ್ಟರ್ ಗಳಾದ ಕೃಷ್ಣರಾಜು, ಶಿವನಂದ್ , ಪಿಎಸ್ಐ ಗಳಾದ ಕುಮುದಾ, ಧನರಾಜು,ಅಚ್ಚುತಾ,ಕೋಟೆಗೌಡ ಬಿಗಿ ಭದ್ರತೆ ಏರ್ಪಡಿಸಿದ್ದರು.