Wednesday, May 21, 2025
Google search engine

Homeಸಿನಿಮಾಕಾಟೇರ ಸಕ್ಸಸ್ ಪಾರ್ಟಿ ಎಫೆಕ್ಟ್ : ಜೆಟ್ ಲಾಗ್ ಪಬ್ ಲೈಸೆನ್ಸ್ ಅಮಾನತು

ಕಾಟೇರ ಸಕ್ಸಸ್ ಪಾರ್ಟಿ ಎಫೆಕ್ಟ್ : ಜೆಟ್ ಲಾಗ್ ಪಬ್ ಲೈಸೆನ್ಸ್ ಅಮಾನತು

ಬೆಂಗಳೂರು : ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ಕಾಟೇರ’ ಚಿತ್ರ ತಂಡದ ಸಕ್ಸಸ್ ಪಾರ್ಟಿ ನಡೆಸಿದ್ದ ಜೆಟ್ ಲ್ಯಾಗ್ ರೆಸ್ಟೋ ಬಾರ್ ಪಬ್ ನ ಲೈಸೆನ್ಸ್ ಅಮಾನತು ಮಾಡಿ ಆದೇಶವನ್ನು ಹೊರಡಿಸಲಾಗಿದೆ. ಅಬಕಾರಿ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ ಎಂದು ತಿಳಿದು ಬಂದಿದೆ. ಜೆಟ್ ಲಾಗ್ ಪಬ್ ನಲ್ಲಿ ೨೫ ದಿನಗಳ ಕಾಲ ಮದ್ಯ ಮಾರಾಟ ಮಾಡಲು ನಿಷೇಧ ಹೇರಲಾಗುವುದು ಅಂತ ತಿಳಿದು ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ನಟ ಡಾಲಿ ಧನುಂಜಯ್, ನಟ ಚಿಕ್ಕಣ್ಣ, ರಾಕ್ ಲೈನ್ ವೆಂಕಟೇಶ್, ಅಭಿಷೇಕ್ ಅಂಬರೀಶ್, ನಿನಾಸಂ ಸತೀಶ್, ಡೈರಕ್ಟರ್ ತರುಣ್ ಸುಧೀರ್, ಮೂಸಿಕ್ ಡೈರೆಕ್ಟರ್ ಹರಿಕೃಷ್ಣ ಸೇರಿ ಎಂಟು ಜನರಿಗೆ ನೊಟೀಸ್ ನೀಡಲಾಗಿತ್ತು,. ಎಲ್ಲರೂ ಕೂಡ ಸುಬ್ರಮಣ್ಯ ಠಾಣೆಗೆ ತೆರಳಿ ಮಾಹಿತಿಯನ್ನು ನೀಡಿದರು.

RELATED ARTICLES
- Advertisment -
Google search engine

Most Popular