ಮದ್ದೂರು: ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಆಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಶ್ರೀ ರಾಮನ ಮೂರ್ತಿ ಮೆರವಣಿಗೆ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ರಾಮನ ಭಾವಚಿತ್ರವನ್ನು ತೆರೆದ ವಾಹನದಲ್ಲಿ ಇಟ್ಟು ಮೆರವಣಿಗೆ ಮಾಡಲಾಯಿತು.
ಈ ವೇಳೆ ಗ್ರಾಮಸ್ಥರು ವಿಶೇಷ ಪೂಜೆ ಮಾಡಿ ಶ್ರೀರಾಮನ ಮೂರ್ತಿಯನ್ನು ಬರಮಾಡಿಕೊಂಡರು. ಎತ್ತಿನ ಗಾಡಿಯಲ್ಲಿ ಶ್ರೀ ರಾಮನ ಮೆರವಣಿಗೆ ಮಾಡುವ ಮೂಲಕ ಭಕ್ತಾದಿಗಳ ಗಮನ ಸೆಳೆದರು.

ರಾಮೋತ್ಸವದ ಅಂಗವಾಗಿ ಸುಮಾರು 3000 ಜನರಿಗೆ ಅನ್ನ ಸಂತರ್ಪಣೆ ಹಾಗೂ ಸಂಜೆ ದೀಪೋತ್ಸವ ಕಾರ್ಯಕ್ರಮವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಶ್ರೀ ರಾಮನ ಭಕ್ತರಾದ ದಾಸೇಗೌಡ, ನಾರಾಯಣ್, ಜಗದೀಶ್ , ಗಿರೀಶ್, ಕೆ.ಪಿ. ಪ್ರಕಾಶ್, ಸುರೇಶ್, ಪಾಂಡುರಂಗ, ಪ್ರಸನ್ನ ಸರ್ಪತ್, ಗಿರೀಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಶಿವಪುರ: ಶಿವಪುರದಲ್ಲಿ ರಾಮೋತ್ಸವದ ಅಂಗವಾಗಿ ವಿಶೇಷವಾಗಿ ಶ್ರೀರಾಮನಿಗೆ ವಿಶೇಷ ಪೂಜೆ ಮಾಡುವ ಮೂಲಕ ರಾಮೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಭಕ್ತಾದಿಗಳಿಗೆ ಎಲ್ ಇ ಡಿ ಮೂಲಕ ಅಯೋಧ್ಯೆ ಯಲ್ಲಿ ನಡೆಯುತ್ತಿರುವ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮ ನೇರ ಪ್ರಸಾರವನ್ನು ಭಕ್ತಾಯ ನೋಡಲು ವ್ಯವಸ್ಥೆಯನ್ನು ಮಾಡಲಾಗಿತ್ತು.
ಇದೆ ವೇಳೆ ಸಾವಿರಾರು ಸಂಖ್ಯೆಯ ಭಕ್ತಾದಿಗಳಿಗೆ ಮೈಸೂರುಪಾಕ್ ವಿತರಿಸಲಾಯಿತು.
ಸಂಜೆ ರಾಮನ ದೇವಸ್ಥಾನದಲ್ಲಿ ವಿಶೇಷ ಪೂಜೆ , ಅನ್ನ ಸಂತರ್ಪಣೆ, ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಡಾ. ಹೊಳ್ಳ, ಸುರೇಶ್ ಕುಮಾರ್, ಕೋಟಿ ಚಂದ್ರಶೇಖರ್, ಗುರು ಮಲ್ಲೇಶ್, ನಾಗೇಶ್, ಚೆಲುವರಾಜು, ನಾರಾಯಣ್, ಸೇರಿದಂತೆ ಹಲವರು ಹಾಜರಿದ್ದರು.