ಮಂಡ್ಯ: 4 ಕಿ.ಮೀ ಕಾಲ್ನಡಿಗೆಯಲ್ಲಿ ಬಂದು ರಾಮನ ದರ್ಶನ ಪಡೆದ ಶ್ವಾನ
ಮಂಡ್ಯ: ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆ ಮಂಡ್ಯದಲ್ಲಿ ಶ್ರೀ ರಾಮನ ದರ್ಶನಕ್ಕೆ ಶ್ವಾನ ಆಗಮಿಸಿದೆ.

ಮಂಡ್ಯದ ಸಂಜಯ್ ವೃತ್ತದಿಂದ ಮಹಾವೀರ ವೃತ್ತ, ಹೊಸಹಳ್ಳಿ ವೃತ್ತದ ಮೂಲಕ ನೆಹರು ನಗರದ ರಾಮಮಂದಿರದವರೆಗೆ ಶ್ವಾನವೊಂದು 4 ಕಿ.ಮೀ ಕಾಲ್ನಡಿಗೆಯಲ್ಲಿ ಬಂದು ರಾಮನ ದರ್ಶನ ಪಡೆದಿದೆ.
ಗೋಪಿನಾಥ್ ಎಂಬುವವರಿಗೆ ಸೇರಿದ ಶ್ವಾನ ರ್ಯಾಂಬೋ ಬಾಯಿಯಲ್ಲಿ ರಾಮ, ಸೀತೆ, ಲಕ್ಷ್ಮಣ ವಿಗ್ರಹದ ಬುಟ್ಟಿಯನ್ನು ಕಚ್ಚಿ ತಂದಿದೆ. ರಾಮನ ದರ್ಶನ ಪಡೆದು ಶ್ವಾನ ಹಾಗೂ ಶ್ವಾನದ ಮಾಲೀಕರು ಖುಷಿ ಪಟ್ಟಿದ್ದಾರೆ.