ಮೈಸೂರು: ಅಶೋಕಪುರಂ ನ ರೈಲ್ವೆಕಾರ್ಯಾಗಾರದಲ್ಲಿ ನಡೆದ ೭೫ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರೌಢಶಾಲೆ ರೈಲ್ವೆ ಕಾರ್ಯಾಗಾರದ ಮಕ್ಕಳು ರೈಲ್ವೆ ರಕ್ಷಣಾ ದಳದವರೊಂದಿಗೆ ಶಿಸ್ತಿನಿಂದ ಪಥ ಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಮತ್ತುಹಲವು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಗಣರಾಜ್ಯೋತ್ಸವದ ಹಿರಿಮೆಯನ್ನುಎತ್ತಿಹಿಡಿದರು. ಸರ್ಕಾರಿ ಪ್ರೌಢಶಾಲೆಯಹೆಣ್ಣುಮಕ್ಕಳಿಂದ ರಾಷ್ಟ್ರೀಯ ಹಬ್ಬದ ಬಗ್ಗೆ ನೃತ್ಯಕಾರ್ಯಕ್ರಮ, ಮತ್ತುಗಂಡು ಮಕ್ಕಳಿಂದ ಪಿರಮಿಡ್‌ರಚನೆಯಕಾರ್ಯಕ್ರಮವನ್ನು ನೀಡಲಾಯಿತು. ಕಾರ್ಯಾಗಾರದ ಮುಖ್ಯ ಪ್ರಬಂಧಕರಾದ ಒ.ಪಿ.ಶಾ ರವರು ಶಾಲೆಯ ಮಕ್ಕಳನ್ನು ಪ್ರಶಂಸಿಸಿ ಬಹುಮಾನಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿಕಾರ್ಯಾಗಾರದಎಲ್ಲಾ ಹಿರಿಯ ಅಧಿಕಾರಿಗಳು, ರೈಲ್ವೆ ನೌಕರರ ಸಂಘದಕಾರ್ಯದರ್ಶಿಗಳಾದ ಯತಿರಾಜು, ಹಾಗು ಪದಾಧಿಕಾರಿಗಳು, ಮುಖ್ಯ ಶಿಕ್ಷಕಿಯರಾದ ಎಲ್ ಲತಾ, ಪ್ರೌಢಶಾಲಾ ಶಿಕ್ಷಕರ ಸಂಘದಅಧ್ಯಕ್ಷರಾದಎನ್ ನಾಗರಾಜು, ಮಹೇಶ್ ಕೆ.ಎಂ., ನೂರ್ ಸಲ್ಮಾ ಬಾನು, ವಿನುತಬಗರೆಚಂದ್ರಕಾಂತಗಣಪತಿ, ನೇತ್ರಾವತಿ ಮುಂತಾದವರು ಭಾಗವಹಿಸಿದ್ದರು.