Sunday, September 21, 2025
Google search engine

Homeರಾಜಕೀಯಮಂಡ್ಯದಲ್ಲಿ ಅಶಾಂತಿ ಸೃಷ್ಠಿಯಾದರೆ ಅದಕ್ಕೆ ಬಿಜೆಪಿ-ಜೆಡಿಎಸ್ ನಾಯಕರು ಕಾರಣ: ಶಾಸಕ ಗಣಿಗ ರವಿಕುಮಾರ್ ವಾಗ್ದಾಳಿ

ಮಂಡ್ಯದಲ್ಲಿ ಅಶಾಂತಿ ಸೃಷ್ಠಿಯಾದರೆ ಅದಕ್ಕೆ ಬಿಜೆಪಿ-ಜೆಡಿಎಸ್ ನಾಯಕರು ಕಾರಣ: ಶಾಸಕ ಗಣಿಗ ರವಿಕುಮಾರ್ ವಾಗ್ದಾಳಿ

ಮಂಡ್ಯ: ಮಂಡ್ಯದಲ್ಲಿ ಅಶಾಂತಿ ತರಲು ಬಿಜೆಪಿ-ಜೆಡಿಎಸ್ ನಾಟಕ ಶುರುಮಾಡಿದೆ. ಜಾತಿ ಜಾತಿ ಸಂಘರ್ಷ ತಂದು ವೋಟ್ ಪಡೆಯೋದಕ್ಕೆ ಮಂಡ್ಯಕ್ಕೆ ಆರ್.ಅಶೋಕ್,  ಕುಮಾರಸ್ವಾಮಿ ಬರ್ತಿದ್ದಿರಾ?  ಮಂಡ್ಯದಲ್ಲಿ ಅಶಾಂತಿಗೆ ಬಿಜೆಪಿ-ಜೆಡಿಎಸ್ ನಾಯಕರು ಕಾರಣ ಎಂದು ಶಾಸಕ ಗಣಿಗ ರವಿಕುಮಾರ್  ವಾಗ್ದಾಳಿ ನಡೆಸಿದ್ದಾರೆ

ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ವಿಚಾರ ಕುರಿತು ಮಂಡ್ಯದಲ್ಲಿ ತುರ್ತು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಮಂಡ್ಯದಲ್ಲಿ ಅಶಾಂತಿ ತರುತ್ತಿದ್ದಾರೆ. ಕೆರಗೋಡು ಗ್ರಾಮದಲ್ಲಿ ಜೆಡಿಎಸ್-ಬಿಜೆಪಿ ನಾಟಕ ಶುರುಮಾಡಿದ್ದಾರೆ ಎಂದು ಕಿಡಿಕಾರಿದರು.

ಕೆರಗೋಡು ಗ್ರಾಮಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಬಸ್ ನಿಲ್ದಾಣ ಕಟ್ಟಲು ಪರಿಶೀಲನೆ ಮಾಡಿದ್ದೆ. ಗರುಡಗಂಭ ನೆಡಲು ಅನುಮತಿ ಕೋರಿದ್ದರು.

ಎರಡನೇ ದಿನಕ್ಕೆ ಬಸ್ ನಿಲ್ದಾಣ ಕಟ್ಟಲು ಅಧಿಕಾರಿಗಳನ್ನ ಪರಿಶೀಲನೆಗೆ ಕಳುಹಿಸಿದ್ದೆ. 6 ಕೋಟಿ ಅನುದಾನಕ್ಕೆ ಪತ್ರ ಬರೆದಿದ್ದೆ. , ಲೋಕೋಪಯೋಗಿ ಇಲಾಖೆಗೆ 6 ಕೋಟಿ ಬಿಡುಗಡೆ ಮಾಡಿದೆ. ರಾಮಲಿಂಗ ರೆಡ್ಡಿ ಅವರಿಗೂ ಪತ್ರ ಬರೆಯಲಾಗಿದೆ.

ಗ್ರಾ.ಪಂ.ಗೆ ಲೆಟರ್ ಕೊಟ್ಟರು 19 ರಂದು ಅನುಮತಿ ಕೊಟ್ಟಿದ್ದಾರೆ. ರಾಷ್ಟ್ರ, ಕನ್ನಡ ಬಾವುಟಕ್ಕೆ ಮಾತ್ರ ಅನುಮತಿ ಕೊಟ್ಟಿದೆ. ಧಾರ್ಮಿಕ ಬಾವುಟ ಆರಿಸದಂತೆ ಸೂಚನೆ ಕೂಡ ಕೊಡಲಾಗಿದೆ. ಮುಚ್ಚಳಿಕೆ ಪತ್ರ ಕೂಡ ಬರೆದುಕೊಟ್ಟಿದ್ದಾರೆ ಎಂದರು.

ಜ.20 ರಂದು ಕುಮಾರಸ್ವಾಮಿ ಮಂಡ್ಯಕ್ಕೆ ಬರಬೇಕಿತ್ತು ಕಾರಣದಿಂದ ಬರಲಿಲ್ಲ. ಕುಮಾರಸ್ವಾಮಿ ಬಂದ್ರೆ ಕರೆಯಲು ಬಂದಿದ್ದಿರಾ ಅಂತ ಹುಡುಗರಿಗೆ ಹೇಳಿದ್ದೆ. ಯುವಕರಿಗೆ ಕುಮ್ಮಕ್ಕು ಕೊಟ್ಟಿದ್ದಾರೆ. ಜ.23 ರಂದು ಡಿಸಿ ಅವರಿಗೆ ದಲಿತ ಮುಖಂಡರು ಅಂಬೇಡ್ಕರ್ ಬಾವುಟ ಹಾಕಲು ಮನವಿ ಕೊಟ್ಟಿದ್ದರು. ಸಂಗೊಳ್ಳಿ ರಾಯಣ್ಣ ಬಾವುಟ, ರೈತ ಬಾವುಟ ಹಾಕಲು ಮನವಿ ಬಂದಿತ್ತು. ಕೆರಗೋಡು ಗ್ರಾಮದಲ್ಲಿ ಸರ್ಕಾರಿ ಜಾಗದಲ್ಲಿ ಧರ್ಮದ ಬಾವುಟ ನೆಡಲು ಅವಕಾಶ ಇಲ್ಲ. ಬಿಜೆಪಿಯವರು ಕಿತಾಪತಿ ಮಾಡ್ತಿದ್ದಾರೆ. ನಮ್ಮ ವಿರುದ್ದ ಸೋತು ನಿರುದ್ಯೋಗಿಗಳಾಗಿದ್ದಾರೆ ಯುವಕರಿಗೆ ಕುಮ್ಮಕ್ಕು ನೀಡಿ ಎತ್ತುಕಟ್ಟಿದ್ದಾರೆ ಎಂದು ಹರಿಹಾಯ್ದರು.

ಇವರು ದೇಶ ಪ್ರೇಮಿಗಳು, ದೇಶ ಪ್ರೇಮಿಗಳಾದ್ರೆ ರಾಷ್ಟ್ರ ಧ್ವಜ ಹಾರಿಸಲು ಯಾಕೆ ವಿರೋಧ ಮಾಡ್ತಿದ್ದಾರೆ. 1 ಲಕ್ಷ ರೂ ದೇಣಿಗೆಯನ್ನ ಆರ್ ಎಸ್ ಎಸ್ ಕೊಟ್ಟಿದ್ದೇನೆ. ಇವತ್ತು ಹೋರಾಟ ಮಾಡುತ್ತಿರುವವರು ಒಂದು ರೂಪಾಯಿ ಕೊಟ್ಟಿಲ್ಲ. ಲೋಕಸಭಾ ಚುನಾವಣೆ ಕದಡಲು ಈ ರೀತಿಯ ಗೊಂದಲ ಸೃಷ್ಟಿ. ರಾಮ ಮಂದಿರದ ಬಳಿ ಬಾವುಟ ಹಾಕಿ ನಾವು ಸಪೋರ್ಟ್ ಮಾಡ್ತೇವೆ ಎಂದು ತಿಳಿಸಿದರು.

ಭಾರತದ ವಿರೋಧಿಗಳು ಜೆಡಿಎಸ್-ಬಿಜೆಪಿ. ಮಂಡ್ಯ ಹೊತ್ತಿ ಉರಿಯಬೇಕು, ಜಾತಿ ಗಲಭೆ ಹಚ್ಚಲು ಮಾಡ್ತಿದ್ದಾರೆ. ಯಾಕೆ ಆರ್.ಅಶೋಕ್, ಕುಮಾರಸ್ವಾಮಿ ಬರೋದು? ಮಂಡ್ಯದಲ್ಲಿ ಶಾಂತಿ ಕದಡಲು ಬರ್ತಿರಾ, ಬೆಂಕಿ ಹಚ್ಚೋಕೆ ಬರ್ತಿರಾ.? ಜಾತಿ ಜಾತಿ ಸಂಘರ್ಷ ತಂದು ವೋಟ್ ಪಡೆಯೋದಕ್ಕೆ ಬರ್ತಿರಾ ನೀವು? ಮಾನ ಮರ್ಯಾದೆ ಇದ್ರೆ ಭಾರತದ ಬಾವುಟ ಹಾರಿಸಲು ಮುಂದಾಗಿ. ಇಲ್ಲ ನಾವು ಭಾರತದ ವಿರೋದಿಗಳು ಅಂತ ಒಪ್ಕೋಳಿ. ರಾಜಕೀಯ ಮಾಡಲು ಅಮಾಯಕ ಯುವಕರನ್ನು ಎತ್ತುಕಟ್ಟುತ್ತಿದ್ದಿರಾ? ಎಂದು ತೀವ್ರ ವಾಗ್ದಾಳಿ ನಡೆಸಿದರು.

ಸಂವಿಧಾನ ಕಾನೂನಿನಗೆ ಎಲ್ಲರು ತಲೆಭಾಗಿ.ದೇಶದ ಕಾನೂನು ಎಲ್ಲರು ಗೌರವ ಕೊಡಿ. ಹುಚ್ಚು ರಾಜಕೀಯ ಅಮಲು ಅಧಿಕಾರಕ್ಕಾಗಿ ಮಂಡ್ಯದ ಯುವಕರು, ರೈತರನ್ನ ಬಲಿ ಕೊಡಬೇಡಿ ಎಂದರು

ರಘುನಂದನ ಕೆರಗೋಡು ಗ್ರಾಮದಲ್ಲಿ ದುಡ್ಡು ಕೊಟ್ಟು ಬಾವುಟ ಹಾಕಿ ಯುವಕರನ್ನ ದಾರಿತಪ್ಪಿಸುತ್ತಿದ್ದಾರೆ. ರಾಮಚಂದ್ರು ಹಾಗೂ ರಘುನಂದನ್ ಎಂಎಲ್ಎ ಟಿಕೆಟ್ ಗೆ ಕಿತ್ತಾಡುತ್ತಿದ್ದಾರೆ. ಮುಂದಿನ ಜೆಡಿಎಸ್ ಅಭ್ಯರ್ಥಿ ಅಂತ ರಘುನಂದನ್ ಬೋರ್ಡ್ ಹಾಕಿಕೊಂಡಿದ್ದಾರೆ. ಅತ್ತ ರಾಮಚಂದ್ರು ಕೂಡ ಬೋರ್ಡ್ ಹಾಕೊಂಡಿದ್ದಾರೆ. ಅವರ ಪ್ರಚಾರಕ್ಕೆ ಕೆರಗೋಡು ಬಡವರನ್ನ ದಾರಿತಪ್ಪಿಸುತ್ತಿದ್ದಾರೆ. ಅಲ್ಲಿ ಭಾರತದ ಬಾವುಟ ಇರಲಿ. ಭಾರತದ ವಿರೋಧಿಗಳಾದ್ರೆ ಭಾರತದ ಬಾವುಟ ಹಾಕಲು ಬಿಡಲ್ಲ. ನಾನು ಜೆಡಿಎಸ್-ಬಿಜೆಪಿ ನಾಯಕರಿಗೆ ಕೈ ಮುಗಿದು ಕೇಳ್ತೇನೆ. ರಾಜಕೀಯವನ್ನು ಅಖಾಡದಲ್ಲಿ ಮಾಡೋಣ. ಜನರಲ್ಲಿ ಧ್ವೇಷ ಬಿತ್ತಿ, ಜಾತಿ ಜಾತಿ ನಡುವೆ ಎತ್ತುಕಟ್ಟಬೇಡಿ. ಜಿಲ್ಲೆಯಲ್ಲಿ ಧರ್ಮದ ವಿಚಾರದಲ್ಲಿ ವೋಟ್ ಕೆಳೋಕೆ ಹೋಗಿ ಸೋತಿದ್ದಾರೆ. ಧ್ವಜ ಹಾರಿಸಲು ವಿರೋಧ ಮಾಡ್ತಿರೋ ಬಿಜೆಪಿ-ಜೆಡಿಎಸ್ ನಾಯಕರಿಗೆ ದಿಕ್ಕಾರ ಎಂದರು.

ನಾನು ಹಿಂದುಗಳ ಪ್ರೇಮಿ ಹನಮ ಧ್ವಜ ಹಾರಿಸಲು 2 ಲಕ್ಷ ದೇಣಿಗೆ ಕೊಡ್ತೇನೆ ರಾಮಮಂದಿರದ ಮುಂದೆ ಹಾರಿಸಿ. ಧರ್ಮ ಧರ್ಮದ ನಡುವೆ ಸಂಘರ್ಷ ಉಂಟು ಮಾಡಬೇಡಿ. ನಾಟಕ ಮಾಡಲು ಮಂಡ್ಯಕ್ಕೆ ಬಾರಬೇಡಿ ಕುಮಾರಣ್ಣ. ನಿಮ್ಮ ಪಕ್ಷದ ಮುಖಂಡರಿಗೆ ಹೇಳಿ. ಇವರು ಬಿಜೆಪಿ ಜೊತೆ ಸೇರಿಕೊಂಡಿದ್ದಾರೆ. ಮುಂದೆ ಮುಂದಿನ ದಿನಗಳಲ್ಲಿ ಬಿಜೆಪಿ-ಜೆಡಿಎಸ್ ಭಾಗವಾಗುತ್ತೆ. ಇವತ್ತು ರಾಮ ರಾಮ ಹಿಂದು ಹಿಂದು  ಅಂತ ಜೆಡಿಎಸ್ ಮಾಡ್ತಿದೆ ಮುಂದೆ ಬಿಜೆಪಿ ಜೊತೆಗೆ ಸೇರ್ಕೊಳ್ತಾರೆ. ಜೆಡಿಎಸ್ ನಾಶವಾಗ್ತಿದೆ ಎಂದು ಹರಿಹಾಯ್ದರು.

RELATED ARTICLES
- Advertisment -
Google search engine

Most Popular