Thursday, May 22, 2025
Google search engine

Homeರಾಜ್ಯವಜಾ ಆದೇಶ ರದ್ದುಗೊಳಿಸಿ ನ್ಯಾಯ ನೀಡುವಂತೆ ಶಿಕ್ಷಕ ಲೋಕೇಶ್ ಒತ್ತಾಯ

ವಜಾ ಆದೇಶ ರದ್ದುಗೊಳಿಸಿ ನ್ಯಾಯ ನೀಡುವಂತೆ ಶಿಕ್ಷಕ ಲೋಕೇಶ್ ಒತ್ತಾಯ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ ಆರ್ ನಗರ :  ಸುಮಾರು 25 ವರ್ಷಗಳಿಂದ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದ ನನ್ನನ್ನು ಯಾವುದೇ ಅಪರಾಧ ಮಾಡದಿದ್ದರೂ ಸೇವೆಯಿಂದ ವಜಾಗೊಳಿಸಿದ್ದು, ಆದೇಶವನ್ನು ರದ್ದು ಪಡಿಸಿ ನನಗೆ ನ್ಯಾಯ ನೀಡುವಂತೆ ಸರ್ಕಾರವನ್ನು ವಜಾಗೊಂಡ ಶಿಕ್ಷಕ ಲೋಕೇಶ್ ಒತ್ತಾಯಿಸಿದರು. 

  ಕೆ.ಅರ್.ನಗರ ಪಟ್ಟಣದ ಪತ್ರಕರ್ತರ ಭವನದಲ್ಲಿ ತಮ್ಮ ಕುಟುಂಬದವರ ಜೊತೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಯಾವುದೇ ಪುರಾವೆ ಇಲ್ಲದೆ ನನಗೆ ನೋಟಿಸ್ ನೀಡದೆ ವಿಚಾರಣೆ ನಡೆಸದೆ ಅಪರಿಚಿತರನ್ನು  ಸಾಕ್ಷಿಯಾಗಿ ಪರಿಗಣಿಸಿ  ನನ್ನನ್ನು ಸೇವೆಯಿಂದ ವಜಾ ಮಾಡಿರುವುದಲ್ಲದೆ ನನಗೆ ಮತ್ತು ನನ್ನ ಕುಟುಂಬಕ್ಕೆ ಅವಮಾನ ಮಾಡಲಾಗಿದೆ ಆದ್ದರಿಂದ ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಉಪನಿರ್ದೇಶಕರ ವಿರುದ್ಧ ಕ್ರಮ ಕೈಗೊಂಡು ನನಗೆ ನ್ಯಾಯ ನೀಡುವಂತೆ ಮನವಿ ಮಾಡಿದರು.  

ಹುಣಸೂರು ತಾಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ  ಸಹ ಶಿಕ್ಷಕನಾಗಿ ಕರ್ತ ವ್ಯ ನಿರ್ವಹಿಸುತ್ತಿದ್ದ ನನ್ನ ವಿರುದ್ಧ ಯಾರೋ  ಅಪರಿಚಿತರೊಬ್ಬರು  ದೂರು ನೀಡಿದ್ದಾರೆ ಎಂಬ ಒಂದೇ ಕಾರಣದಿಂದ ನನ್ನನ್ನು ವಜಾ ಮಾಡಲಾಗಿದೆ,  ನನ್ನ ಎಲ್ಲಾ ದಾಖಲೆಗಳು, ಪುರಾವೆಗಳು ಸತ್ಯವಾಗಿದ್ದು ಈ ಬಗ್ಗೆ ಕೆಆರ್ ನಗರ ತಹಸಿಲ್ದಾರ್ ಅವರಿಂದ ವಂಶವೃಕ್ಷ ಸೇರಿದಂತೆ ಎಲ್ಲಾ ದಾಖಲೆಗಳನ್ನು ನೀಡಿದ್ದು ಯಾವುಗಳನ್ನು ಪರಿಶೀಲಿಸದೆ ವಜಾ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ನಾನೇ ಲೋಕೇಶ್ ಎಂದು ಸಂಬಂದಿಸಿದ ಎಲ್ಲ ದಾಖಲೆಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಖುದ್ದಾಂ ನೀಡಿದ್ದೇನೆ, ನನ್ನ ಬಳಿ ಪಡೆದಿರುವ ಸಹಿ ಇದೆ, ಪರೀಲಿಸದೇ ವಜಾ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು ಈ ಪ್ರಕರಣ ಪಿರಿಯಾಪಟ್ಟಣದ ನ್ಯಾಯಾಲದಲ್ಲಿ ಇದ್ದರು ಏಕಾಏಕಿ ವಜಾ ಮಾಡಲು ಇವರ ಉದ್ದೇಶ ಏನು ಎಂದು ಶಿಕ್ಷಣ ಇಲಾಖೆ ಅಧಿಕಾರಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಆದ್ದರಿಂದ ಸರ್ಕಾರ ತಕ್ಷಣ ಈ ಪ್ರಕರಣವನ್ನು ವಿಶೇಷ ಪ್ರಕರಣ ವೆಂದು ಪರಿಗಣಿಸಿ ಎಲ್ಲಾ ದಾಖಲೆ ಗಳು ಮತ್ತು ಸ್ಥಳ ಪರಿಶೀಲನೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ನನಗೆ ನ್ಯಾಯ ಕೊಡಿಸುವಂತೆ ನೊಂದ ಶಿಕ್ಷಕ ಮತ್ತು ಅವರ ಕುಟುಂಬಸ್ಥರು ಮನವಿ ಮಾಡಿದರು.

 ಈ ಸಂದರ್ಭದಲ್ಲಿ ಪತ್ನಿ ಬಿ ಎನ್ ಶೋಭಾ,  ಗಣೇಶ್, ಲಕ್ಷ್ಮೀದೇವಿ, ಶಿಲ್ಪ ಹಾಜರಿದ್ದರು.

RELATED ARTICLES
- Advertisment -
Google search engine

Most Popular