Saturday, May 24, 2025
Google search engine

Homeರಾಜ್ಯಗ್ರಾಮಾಂತರ ಪ್ರದೇಶದ ಮಕ್ಕಳು ಸರ್ಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಿ: ದೊಡ್ಡಸ್ವಾಮೇಗೌಡ

ಗ್ರಾಮಾಂತರ ಪ್ರದೇಶದ ಮಕ್ಕಳು ಸರ್ಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಿ: ದೊಡ್ಡಸ್ವಾಮೇಗೌಡ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್. ನಗರ:  ಸರ್ಕಾರವು ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಬಿಸಿಊಟ ಮತ್ತು ಉಚಿತ ಸಮವಸ್ತ್ರ ನೀಡಿ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿದ್ದು, ಇದನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಶಿಕ್ಷಣ ಪಡೆದು ಕೊಳ್ಳಿ ಎಂದು ಮಕ್ಕಳಿಗೆ ಕೆಪಿಸಿಸಿ ಕಾರ್ಯ  ಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಹೇಳಿದರು.

ಸಾಲಿಗ್ರಾಮ ತಾಲೂಕಿನ ಸಾಲುಕೊಪ್ಪಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಾಲಾವಾರ್ಷಿಕೋತ್ಸವ ಮತ್ತು ಶಾರದ ಪೂಜಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 ಸರ್ಕಾರಿ ಶಾಲೆಯಲ್ಲಿ ಓದಿದರೇ ಸಾಲದು ಓದಿ ಉನ್ನತ ಸ್ಥಾನಕ್ಕೆ ಹೋದಾಗ ತಾವು ಓದಿದ ಶಾಲೆಗಳನ್ನು ಮರೆಯದೇ ಶಾಲೆಗಳ ಅಭಿವೃದ್ದಿಗೆ ಕೊಡುಗೆ ನೀಡಿದಾಗ ಶಾಲೆಗಳು ಉನ್ನತವಾಗಿ ಅಭಿವೃದ್ದಿ ಹೊಂದುತ್ತವೆ ಎಂದರು.

ಶಾಲೆಯಲ್ಲಿ ಮಕ್ಕಳಿಗೆ  ಶಿಕ್ಷಣ  ನೀಡಿ ವರ್ಗಾವಣೆ ಗೊಂಡ ಶಿಕ್ಷಕರನ್ನು ಮರೆತು ಬಿಡುವ ಈ ದಿನಗಳಲ್ಲಿ ಅಂತಹ ಶಿಕ್ಷಕರನ್ನು ಶಾಲೆಗೆ ಕರೆಸಿ ಅವರನ್ನು ಗೌರವಿಸುವ ಕೆಲಸ ಮಾಡಿ ಅವರಿಗೆ ಈ ಕ್ಷೇತ್ರದಲ್ಲಿ ಗೌರವ ಮತ್ತು  ಜವಬ್ದಾರಿ ಹೆಚ್ಚುಸುವ ಕೆಲಸವನ್ನು ಶಾಲೆಯ ಆಡಳಿತ ಮಂಡಳಿ ಜತಗೆ ಗ್ರಾಮಸ್ಥರು   ಮಾಡಿರುವುದು ಶ್ಲಾಘನೀಯ ಎಂದರು

ಸಿ.ಆರ್.ಪಿ. ಮಹೇಶ್ ಮಾತನಾಡಿ ಪೋಷಕರು ಮಕ್ಕಳ ಶಿಕ್ಷಣದಲ್ಲಿ  ಓದಿಗಷ್ಟೆ ಸೀಮಿತಮಾಡದೇ ಅವರನ್ನು ಇತರೆ ಚಟುವಟಿಕೆಗಳಾದ ಕ್ರೀಡೆ,ಸಾಂಸ್ಕೃತಿಕ ಕಲೆಗಳಿಗೆ ಶಿಕ್ಷಣದಷ್ಟೆ ಮಹತ್ವ ನೀಡಿದರೇ ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗಲಿದ್ದು ಸರ್ಕಾರಿ ಶಾಲೆಗಳ ಉಳಿವಿಗಾಗಿ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸುವಂತೆ ಮನವಿ ಮಾಡಿದರು

ಈ ಸಂದರ್ಭದಲ್ಲಿ ಮಾಜಿ ತಾ.ಪಂ.ಸದಸ್ಯ ಚಂದ್ರಶೇಖರ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಉದಯ್, ಕಾಂಗ್ರೇಸ್ ಮುಖಂಡ ಸಾಲಿಗ್ರಾಮ ಪ್ರಭಾಕರ್, ಗ್ರಾ.ಪಂ.ಸದಸ್ಯ ರಂಗಸ್ವಾಮಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್,ಉಪಾಧ್ಯಕ್ಷೆ ಕಾಂತಮಣಿ, ಸದಸ್ಯರಾದ  ಸ್ವಾಮೀಗೌಡ, ಚಂದ್ರೇಗೌಡ,ಸಂಜೀವ್,ಪ್ರಕಾಶ್, ಮುಖ್ಯಶಿಕ್ಷಕಿ ಕೆ. ಜಯಂತಿ,  ಶಿಕ್ಷಕರಾದ ಎಸ್. ಕೆ.ಕಿಶೋರ್  ಸೇರಿದಂತೆ ಮತ್ತಿತರರು ಹಾಜರಿದ್ದರು

RELATED ARTICLES
- Advertisment -
Google search engine

Most Popular