Friday, May 23, 2025
Google search engine

Homeಅಪರಾಧಧಾರವಾಡ: ರಾಡ್‌ ನಿಂದ ಹೊಡೆದು ಕುಕ್ ಕೊಲೆಗೈದ ವೈಟರ್

ಧಾರವಾಡ: ರಾಡ್‌ ನಿಂದ ಹೊಡೆದು ಕುಕ್ ಕೊಲೆಗೈದ ವೈಟರ್

ಧಾರವಾಡ: ಇಲ್ಲಿಯ ಹೋಟೆಲ್‌ ವೊಂದರಲ್ಲಿನ ಕುಕ್ ಆಗಿದ್ದ ವ್ಯಕ್ತಿಯನ್ನು ಅದೇ ಹೋಟೆಲ್‌ ನ ವೈಟರ್‌ ಆಗಿ ಕೆಲಸ ಮಾಡುತ್ತಿದ್ದವನು ರಾಡ್‌ ನಿಂದ ಹೊಡೆದು ಕೊಲೆ ಮಾಡಿದ ಘಟನೆ ಫೆ. 7ರ ಬುಧವಾರ ಬೆಳಗಿನ ಜಾವ ಸಂಭವಿಸಿದೆ.

ದಾಂಡೇಲಿ ಮೂಲದ ಕನಯ್ಯ ಎಂಬ ವ್ಯಕ್ತಿ ಹೋಟೆಲ್‌ವೊಂದರಲ್ಲಿ ಕುಕ್ ಆಗಿದ್ದ. ಶಿರಹಟ್ಟಿ ತಾಲೂಕಿನ ಸುಗನಳ್ಳಿ ಗ್ರಾಮದ ಫಕ್ಕೀರೇಶ ಪ್ಯಾಟಿ (40) ಎಂಬಾತನನ್ನು ರಾಡ್‌ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಭೋವಿ ಗಲ್ಲಿಯ ಹೋಟೆಲ್‌ನ ರೂಮ್‌ನಲ್ಲಿದ್ದ ಈ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿ ಈ ಹತ್ಯೆ ನಡೆದಿದೆ.

ಕಳೆದ ಮೂರು ದಿನಗಳಿಂದ ಮೂರು ಕೊಲೆಗಳಾಗಿದ್ದು, ಇವೆಲ್ಲವೂ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದರೆ, ಇದೀಗ ನಗರದಲ್ಲಿ ನಾಲ್ಕನೇ ಕೊಲೆಯು ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಶಹರ ಠಾಣೆ ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

RELATED ARTICLES
- Advertisment -
Google search engine

Most Popular