Wednesday, May 21, 2025
Google search engine

Homeರಾಜ್ಯಸಿಪಿಐಎಂ ಪಕ್ಷದ ಹಿರಿಯ ಮುಖಂಡ ನಾರಾಯಣ ತಲಪಾಡಿ ಹೃದಯಾಘಾತದಿಂದ ನಿಧನ

ಸಿಪಿಐಎಂ ಪಕ್ಷದ ಹಿರಿಯ ಮುಖಂಡ ನಾರಾಯಣ ತಲಪಾಡಿ ಹೃದಯಾಘಾತದಿಂದ ನಿಧನ

ಮಂಗಳೂರು(ದಕ್ಷಿಣ ಕನ್ನಡ): ಸಿಪಿಐಎಂ ಪಕ್ಷದ ಹಿರಿಯ ಮುಖಂಡ ಮಂಗಳೂರಿನ ತಲಪಾಡಿ ನಾರ್ಲ ನಿವಾಸಿ ನಾರಾಯಣ ತಲಪಾಡಿ(68) ಹೃದಯಾಘಾತದಿಂದ ಇಂದು ನಿಧನ ಹೊಂದಿದ್ದಾರೆ.

ಪಕ್ಷದ ಚಟುವಟಿಕೆ ನಿಮಿತ್ತ ಉಪ್ಪಳದ ಮುಖಂಡರೊಬ್ಬರ ಮನೆಗೆ ತೆರಳಿ ವಾಪಸ್ಸಾಗುವಾಗ ಹೃದಯಾಘಾತ ಉಂಟಾಗಿದೆ ಎಂದು ತಿಳಿದುಬಂದಿದೆ.

ಇವರು ಸಿಪಿಐಎಂ ಉಳ್ಳಾಲ ವಲಯ ಸಮಿತಿ ಸದಸ್ಯರು, ದಲಿತ ಹಕ್ಕುಗಳ ಹೋರಾಟ ಸಮಿತಿ ಜಿಲ್ಲಾ ಸದಸ್ಯರು, ಕೋಟೆಕಾರು ಸರ್ಕಲ್ ಬೀಡಿ ಲೇಬರ್ ಯೂನಿಯನ್ ವಲಯ ಸಮಿತಿ ಸದಸ್ಯ, ಕೆಪಿಆರ್ ಎಸ್ ರೈತ ಸಂಘದ ಜಿಲ್ಲಾ ಸಮಿತಿ ಸದಸ್ಯರು, ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘ ನಾಲ್ಕನೇ ಅವಧಿಯ ನಿರ್ದೇಶಕರಾಗಿದ್ದರು. ತಲಪಾಡಿ ಭಾಗದಲ್ಲಿ ಕೊರಗಜ್ಜನ ಪಾತ್ರಿಯಾಗಿಯೂ ದೈವಾರಾಧನೆಯಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬೀಡಿ ಲೇಬರ್, ದಲಿತ ಹಕ್ಕುಗಳಿಗೆ ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು.

RELATED ARTICLES
- Advertisment -
Google search engine

Most Popular