Tuesday, January 20, 2026
Google search engine

Homeರಾಜ್ಯನನ್ನನ್ನು ಭೇಟಿ ಮಾಡಿ, ಭರವಸೆ ಕೊಟ್ಟವರಿಗೆ ಮತ ಹಾಕ್ತೀನಿ: ಸೋಮಶೇಖರ್

ನನ್ನನ್ನು ಭೇಟಿ ಮಾಡಿ, ಭರವಸೆ ಕೊಟ್ಟವರಿಗೆ ಮತ ಹಾಕ್ತೀನಿ: ಸೋಮಶೇಖರ್

ಬೆಂಗಳೂರು: ನಾನು ಯಾರನ್ನೂ ಭೇಟಿ ಮಾಡಲ್ಲ. ನನ್ನನ್ನು ಭೇಟಿ ಮಾಡಿ, ಭರವಸೆ ಕೊಟ್ಟರೆ ಅವರಿಗೆ ಮತ ಹಾಕುತ್ತೇನ ಎಂದು ಮಾಜಿ ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿದ್ದಾಗ ಬಿಜೆಪಿಗೆ, ಕಾಂಗ್ರೆಸ್‌ನಲ್ಲಿದ್ದಾಗ ಕಾಂಗ್ರೆಸ್‌ಗೆ ವೋಟ್ ಹಾಕಿದ್ದೇನೆ. ಕಳೆದ ಬಾರಿ ನಿರ್ಮಲಾ ಸೀತಾರಾಮನ್‌ಗೆ ಹಾಕಿ ಎಂದರು. ಆದರೆ ಎಲೆಕ್ಷನ್ ಮುಗಿದ ಮೇಲೆ ನಿರ್ಮಲಾ ಸೀತಾರಾಮ ಭೇಟಿಗೆ ಅವಕಾಶವೇ ಕೊಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸಿಎಂ ಆದ್ಮೇಲೆ ಒಂದು, ಆಗೋ ಮುಂಚೆ ಒಂದಾ..? ವೋಟ್ ಹಾಕಿದ ಮೇಲೆ ನಮಗೆ ವ್ಯಾಲ್ಯೂ ಇಲ್ವಾ..?. ರಾಜ್ಯಸಭೆ ಅಭ್ಯರ್ಥಿಗೆ ಅನುದಾನ ಬರುತ್ತೇ.. ಆ ಅನುದಾನ ನನ್ನ ಕ್ಷೇತ್ರಕ್ಕೆ ಕೊಡೊರಿಗೆ ನಾನು ಮತ ಹಾಕುತ್ತೇನೆ ಎಂದು ಎಸ್‌ಟಿಎಸ್ ಸ್ಪಷ್ಟನೆ ನೀಡಿದರು.

RELATED ARTICLES
- Advertisment -
Google search engine

Most Popular