ಹುಣಸೂರು: ಮೃತ ಮುತ್ತುರಾಜ್ ಕೊಲೆಗೆ ಕಾರಣರಾದ ಆರೋಪಿಗಳ ಪತ್ತೆ ಹಚ್ಚುವ ಮೂಲಕ ಪೊಲೀಸರು ಶೀಘ್ರವಾಗಿ ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎಂದು ನಿಟ್ಟೂರು ಮಠದ ಶ್ರೀ ರೇಣುಕಾ ಸ್ವಾಮಿ ಆಗ್ರಹಿಸಿದರು.
ಬುಧವಾರ ಬೆಳಗ್ಗೆ ತಾಲೂಕಿನ ದಾಸನಪುರ ಗ್ರಾಮದಲ್ಲಿ ಇತ್ತೀಚಿಗೆ ಹತ್ಯೆಯಾದ ವಿದ್ಯಾರ್ಥಿ ಮುತ್ತುರಾಜ್ ಮನೆಗೆ ಭೇಟಿ ನೀಡಿ ಮೃತ ಯುವಕನ ತಂದೆ ರವಿಕುಮಾರ್, ತಾಯಿ ವಸಂತರಿಗೆ ಸಾಂತ್ವನ ಹೇಳಿ ನಂತರ ಮಾತನಾಡಿದ ಅವರು, ಕೊಲೆ ನಡೆದು ಒಂದು ಕಳೆದಿದೆ. ಕೊಲೆ ಯಾರು ಮಾಡಿದ್ದಾರೆ ಎಂಬುದನ್ನು ಕಂಡು ಹಿಡಿಯುವ ಜವಾಬ್ದಾರಿ ಪೊಲೀಸರ ನೇಲಿದ್ದು ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಮೃತ ಯುವಕನಿಗೆ ನ್ಯಾಯ ಸಿಗದಿದ್ದರೆ ಹಾಲಿ ಶಾಸಕರು, ಸಂಸದರು, ಮಾಜಿ ಶಾಸಕರು ಮತ್ತು ಸಮಾಜದ ಬಂಧುಗಳೊಂದಿಗೆ ಹುಣಸೂರು ನಗರದಲ್ಲಿ ಬೃಹತ್ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಸರಕಾರ ಈ ಕೂಡಲೇ ಮನೆಗೆ ಆಧಾರ ಸ್ತಂಬವಾಗಿದ್ದ ಒಬ್ಬನೆ ಮಗನನ್ನು ಕಳದುಕೊಂಡು ಅನಾಥವಾಗಿರುವ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
ನಂತರ ಮಾತನಾಡಿ ಮೈಸೂರು – ಚಾಮರಾಜನಗರ ಜಿಲ್ಲಾ ಈಡಿಗ ಸಂಘದ ಅಧ್ಯಕ್ಷ ಎಂ.ಕೆ.ಪೋತರಾಜ್ ಮೃತ ಕುಟುಂಬಕ್ಕೆ ವೈಯಕ್ತಿಕವಾಗಿ ಒಂದು ಲಕ್ಷದ ಚೆಕ್ ನೀಡಿ,ಕಳದುಕೊಂಡ ಮಗನನ್ನು ನಾವು ಕೊಡಲು ಸಾಧ್ಯವಿಲ್ಲ ಇರುವ ಮಗಳಿಗೆ ಉತ್ತಮ ರೀತಿಯಲ್ಲಿ ಪರಿಪೂರ್ಣ ವಿದ್ಯಾಬ್ಯಾಸವನ್ನು ನಾವು ಮತ್ತು ಮಠವು ನೋಡಿಕೊಳ್ಳಲಿದೆ ಎಂದು ನೊಂದ ಕುಟುಂಕ್ಕೆ ಆತ್ಮಸ್ಥೈರ್ಯ ತುಂಬಿದರು.
ಮೃತ ಮುತ್ತುರಾಜನನ್ನು ಕೊಂದಿರುವುವರು ಯಾರೇ ಆಗಿರಲಿ ಶಿಕ್ಷೆಯಾಗಬೇಕು ಎಂದು ಸಮಾಜದ ಪರವಾಗಿ ಒತ್ತಾಯಿಸಿದರು. ಜತೆಗೆ ರತ್ನಾಪುರಿ ಧಾರ್ಮಿಕ ಕೇಂದ್ರವಾಗಿದ್ದು, ಇಲ್ಲಿ ಇತ್ತೀಚಿಗೆ ಪುಂಡರ ತಾಣವಾಗಿದ್ದು, ವೀಲಿಂಗ್ ಮಾಡುವ ಸಂಖ್ಯೆ ಜಾಸ್ತಿಯಾಗಿದೆ. ಆದ್ದರಿಂದ ಆರಕ್ಷಕ ಠಾಣೆ ಅಗತ್ಯವಿದ್ದು ಶೀಘ್ರವಾಗಿ ತೆರೆಯಬೇಕಿದೆ ಎಂದು ಸರಕಾರವನ್ನು ಒತ್ತಾಯಿಸಿದರು.
ಅವರೊಂದಿಗೆ ತಾಲೂಕು ಈಡಿಗ ಸಮಾಜ ಅಧ್ಯಕ್ಷ ವಿಶ್ವನಾಥ್, ಕಾರ್ಯದರ್ಶಿ ಧರ್ಮಾಪುರ ಶ್ಯಾಮ್, ಸಮಾಜದ ಗೋವಿಂದರಾಜು, ಸ್ವಾಮಿ, ಹರೀಶ್, ಶ್ರೀ ನಿವಾಸ್, ಗಿರೀಶ್, ಮಹದೇವ್, ನಾರಾಯಣ್ ಇದ್ದರು.