ಚಾಮರಾಜನಗರ: ಹನೂರು ತಾಲೂಕಿನ ಪ್ರಸಿದ್ದ ಯಾತ್ರಾ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾರ್ಚ್ ೭ ರಿಂದ ೧೧ ರವರೆಗೆ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಹಾಗೂ ಏಪ್ರಿಲ್ ೬ ರಿಂದ ೯ರವರೆಗೆ ಯುಗಾದಿ ಜಾತ್ರಾ ಮಹೋತ್ಸವ ನಡೆಯಲಿದೆ.
ಮಾರ್ಚ್ ೭ರಂದು ಮಹಾಶಿವರಾತ್ರಿ ಜಾತ್ರೆ ಪ್ರಾರಂಭವಾಗಲಿದೆ. ೮ ರಂದು ಸ್ವಾಮಿಗೆ ಎಣ್ಣೆಮಜ್ಜನ, ಜಾಗರಣೆ ಉತ್ಸವ, ೯ ರಂದು ಸ್ವಾಮಿಗೆ ವಿಶೇಷ ಸೇವೆ ಉತ್ಸವಾದಿಗಳು ಜರುಗಲಿದೆ. ೧೦ರಂದು ಅಮವಾಸ್ಯೆ, ವಿಶೇಷ ಸೇವೆ ಉತ್ಸವಾದಿಗಳು ನೆರವೇರಲಿವೆ. ಮಾರ್ಚ್ ೧೧ ರಂದು ಬೆಳಿಗ್ಗೆ ೯.೪೦ ರಿಂದ ೧೦.೧೦ ಗಂಟೆಯವರೆಗೆ ಮಹಾಶಿವರಾತ್ರಿ ಮಹಾರಥೋತ್ಸವ ಪ್ರಾರಂಭವಾಗಲಿದೆ. ರಾತ್ರಿ ಅಭಿಷೇಕ ಪೂಜೆ ಮುಗಿದ ನಂತರ ಕೊಂಡೋತ್ಸವ ಜರುಗಲಿದೆ.
ಏಪ್ರಿಲ್ ೪ ರಂದು ಯುಗಾದಿ ಜಾತ್ರೆ ಆರಂಭವಾಗಲಿದೆ. ೭ ರಂದು ಶ್ರೀ ಸ್ವಾಮಿಗೆ ಎಣ್ಣೆಮಜ್ಜನ, ವಿಶೇಷ ಸೇವೆ ಉತ್ಸವಾದಿಗಳು ನಡೆಯಲಿದೆ. ೮ ರಂದು ಯುಗಾದಿ ಅಮವಾಸ್ಯೆ, ವಿಶೇಷ ಸೇವೆ ಉತ್ಸವಾದಿಗಳು ಜರುಗಲಿದೆ. ಏಪ್ರಿಲ್ ೯ ರಂದು ಬೆಳಿಗ್ಗೆ ೭.೩೦ ರಿಂದ ೯ ಗಂಟೆಯವರೆಗೆ ಚಾಂದ್ರಮಾನ ಯುಗಾದಿ, ಮಹಾರಥೋತ್ಸವ ಪ್ರಾರಂಭವಾಗಲಿದೆ ಎಂದು ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.