Thursday, May 22, 2025
Google search engine

Homeರಾಜ್ಯರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ: ಪ್ರಹ್ಲಾದ್ ಜೋಶಿ

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ: ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಆದ ಬಾಂಬ್ ಸ್ಫೋಟ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ  ಆರೋಪಿಸಿದ್ದಾರೆ.

ರಾಜ್ಯದಲ್ಲಿ ಇಸ್ಲಾಮಿಕ್ ಮೂಲಭೂತವಾದ ನಡೆಯುತ್ತಿದೆ. ಎಸ್ ​ಡಿಪಿ ಮತ್ತು ಪಿಎಫ್ ​ಐ ಮೇಲಿನ ಕೇಸ್ ವಾಪಸ್ಸು ಪಡೆದು ಕಾಂಗ್ರೆಸ್ ಸರ್ಕಾರ ಅವರ ಪರವಾಗಿ ಇದೆ ಅಂತ ತೋರಿಸಿದ್ದರು ಎಂದು ಪ್ರಹ್ಲಾದ್ ಜೋಶಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರ ಮೇಲೆ ಯಾವುದೇ ಕರ್ಮ ಇಲ್ಲ. ರಾಜ್ಯದ ಸಾಮಾನ್ಯ ಜನರ ಬದುಕು ಅಸುರಕ್ಷಿತವಾಗಿದೆ. ಕಟರ್ ಇಸ್ಲಾಮಿಕ್ ಮೂಲಭೂತವಾದಿಗಳಿಗೆ ರಾಜ್ಯ ಸರ್ಕಾರ ಸಹಕಾರ ನೀಡುತ್ತಿದೆ. ಇದಕ್ಕೆ ನೇರವಾಗಿ ಸಿಎಂ ಸಿದ್ದರಾಮಯ್ಯ ಅವರೇ ಕಾರಣ. ಎಲ್ಲಾ ಗಾಯಳುಗಳ ಆರೋಗ್ಯ ಬೇಗ ಸುಧಾರಿಸಲಿ. ಉಗ್ರರಿಗೆ ಕರ್ನಾಟಕ ಸ್ವರ್ಗವಾಗಿದೆ. ಮೂಲಭೂತವಾದಿಗಳಿಗೆ ಮತ್ತು ಉಗ್ರರಿಗೆ ಇದು ಸುರಕ್ಷಿತ ಅನ್ನಿಸುತ್ತಿದೆ. ಈ ನಾನ್ಸೆನ್ಸ್ ಅಪ್ರೋಚ್ ನನ್ನು ಸಿದ್ದರಾಮಯ್ಯ ನಿಲ್ಲಿಸಬೇಕು. ಕೆಲವು ಪೊಲೀಸ್ ಇಲಾಖೆ ರಾಜ್ಯಗಳಲ್ಲಿ ಉಗ್ರವಾದಿಗಳಿಗೆ ಸೇಫ್ ಹವೆನ್ ಕೊಟ್ಟಿದ್ದಾರೆ. ತುಷ್ಟೀಕರಣ ನೀತಿಯಿಂದ ಈ ರೀತಿಯಲ್ಲಿ ಘಟನೆ ಆಗುತ್ತಿವೆ ಎಂದರು.

ನಾಸೀರ್ ಹುಸೇನ್ ​ಗೆ ನಾಚಿಕೆ ಆಗಬೇಕು. ಪ್ರಕರಣವನ್ನು ಎನ್ ​ಐಎ ತನಿಖೆಗೆ ನೀಡಲು ನನ್ನ ಆಗ್ರಹವಿದೆ. ಯಾವುದಕ್ಕೆ ನಾವು ರಾಜ್ಯ ಸರ್ಕಾರಕ್ಕೆ ಸಹಕಾರ ನೀಡಬೇಕು. ಈ ಸರ್ಕಾರ ಭಯೋತ್ಪಾದಕತೆ ನಿಲ್ಲಿಸುತ್ತವೆ ಅಂದ್ರೆ ಮಾತ್ರ ಸಹಕಾರ ನೀಡುತ್ತೇವೆ. ಇವರು ನಮ್ಮಿಂದ ಏನು ಬಯಸುತ್ತಿದ್ದಾರೆ. ಇದು ಹೇಡಿ, ನಾಚಿಕೆಗೇಡಿನ ಕೃತ್ಯ. ನೀವು ಓಟ್ ಬ್ಯಾಂಕ್ ​ಗಾಗಿ ದೇಶವನ್ನು ಅಭದ್ರ ಮಾಡುತ್ತಿದ್ದೀರಿ. ಜಿಹಾದಿ ರಾಜಕೀಯಕ್ಕೆ ನಾವು ಬೆಂಬಲ ನೀಡಬೇಕಾ? ಅತ್ಯಂತ ಅಯೋಗ್ಯ ಸರ್ಕಾರ ಇದು. ಈ ರೀತಿಯ ಚಿಲ್ಲರೆ, ತುಷ್ಟ ರಾಜಕೀಯ ನಿಲ್ಲಿಸಬೇಕು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.

ಇನ್ನು ಯಾವುದೇ ಪೂರ್ವ ತಯಾರಿ ಇಲ್ಲದೆ ಜಾತಿಗಣತಿ ಮಾಡಿದ್ದಾರೆ. ಮೊದಲು ಕಾಂಗ್ರೆಸ್ ನಿಲುವು ಸ್ಪಷ್ಟಪಡಿಸಲಿ. ಆ ಮೇಲೆ ಬಿಜೆಪಿ ನಿಲವು ತಿಳಿಸುತ್ತದೆ. ನಾನು ಈಗಾಗಲೇ ಸಾಕಷ್ಟು ಚುನಾವಣಾ ತಯಾರಿ ಮಾಡಿದ್ದೇನೆ. ನನಗೆ ಎಲ್ಲಾ ವರ್ಗದ ಬೆಂಬಲ ಇದೆ ಎಂದು ಜೋಶಿ ತಿಳಿಸಿದರು.

RELATED ARTICLES
- Advertisment -
Google search engine

Most Popular