ನವದೆಹಲಿ: ಪವಿತ್ರ ರಂಜಾನ್ ತಿಂಗಳ ಆರಂಭದ ಮುನ್ನಾ ದಿನದಂದು ಸಾಮಾಜವನನ್ನು ವಿಭಜಿಸುವ ಮತ್ತು ತಾರತಮ್ಯದ ಸಿಎಎ ಕಾಯಿದೆಯನ್ನು ಜಾರಿಗೊಳಿಸುವುದರ ಹಿಂದೆ ಮುಸ್ಲಿಮರನ್ನು ಅಪಹಾಸ್ಯ ಮಾಡುವ ಸಂಘ ಪರಿವಾರದ ಹೇಯ ತಂತ್ರ ಅಡಗಿದೆ. ಈ ಕಾಯ್ದೆ ರಾಷ್ಟ್ರದ ಸಮಗ್ರತೆಗೆ ಧಕ್ಕೆ ತರುತ್ತದೆ. ಸಿಎಎ ಅನುಷ್ಠಾನದ ವಿರುದ್ಧ ಕಾನೂನಾತ್ಮಕವಾಗಿ ಮತ್ತು ರಾಜಕೀಯವಾಗಿ ಹೋರಾಡುತ್ತೇವೆ ಎಂದು ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ ಹೇಳಿದ್ದಾರೆ.
೧೯೫೫ ರ ಪೌರತ್ವ ಕಾಯ್ದೆಗೆ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಎನ್‌ಡಿಎ ಸರ್ಕಾರ ತಂದಿರುವ ತಿದ್ದುಪಡಿಯು ಸಂಪೂರ್ಣವಾಗಿ ಅನಗತ್ಯವಾಗಿದ್ದು ಅದು ದೇಶದ ಮುಸ್ಲಿಮರನ್ನು ಪ್ರತ್ಯೇಕಿಸುವ ಏಕೈಕ ಗುರಿಯನ್ನು ಹೊಂದಿದೆ. ನೆರೆಯ ದೇಶಗಳಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗುವವರಿಗೆ ಪೌರತ್ವವನ್ನು ಒದಗಿಸಲು ತಿದ್ದುಪಡಿಯನ್ನು ಮಾಡಲಾಗಿದೆ ಎಂದು ಸಂಘಪರಿವಾರದ ಪಾಳೆಯವು ಹೇಳಿಕೊಂಡಿದೆ. ಆದರೆ ಈ ಕಾಯಿದೆಯೇ ಧಾರ್ಮಿಕ ತಾರತಮ್ಯದಿಂದ ಕೂಡಿದೆ. ಈ ಕಾಯ್ದೆಯ ವ್ಯಾಪ್ತಿಯಿಂದ ಮುಸ್ಲಿಮರನ್ನು ಹೊರಗಿಟ್ಟಿರುವುದು ಅದಕ್ಕೆ ಉದಾಹರಣೆ. ಆದ್ದರಿಂದ ಈ ಕಾಯಿದೆ ಅಸಂವಿಧಾನಿಕವಾಗಿದೆ.
೨೦೧೯ ರಲ್ಲಿ ಈ ಕಾಯಿದೆಯ ತಿದ್ದುಪಡಿ ಅಂಗೀಕಾರವಾದಾಗ ದೇಶಾದ್ಯಂತ ಬೀದಿಗಳಲ್ಲಿ ಸುದೀರ್ಘ ಪ್ರತಿಭಟನೆಗಳಗೆ ವೇದಿಕೆಯಾಗಿತ್ತು. ದೇಶದ ಜನರು ಧರ್ಮ, ಜಾತಿ, ಲಿಂಗ ಅಥವಾ ಪ್ರದೇಶವನ್ನು ಲೆಕ್ಕಿಸದೆ ಈ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದರು. ಆ ಮೂಲಕ ಕಾಯಿದೆಯ ಅನುಷ್ಠಾನವನ್ನು ತಡೆಹಿಡಿಯುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು.
ಮುಂಬರುವ ಲೋಕಸಭಾ ಚುನಾವಣೆಗಳಿಗೆ ಹೊಸ್ತಿಲಲ್ಲಿ ಸಿಎಎ ಕಾಯಿದೆಯನ್ನು ಜಾರಿಗೊಳಿಸುವ ಪ್ರಸ್ತುತ ಅಧಿಸೂಚನೆಯು ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವ ಮೂಲಕ ಮತಗಳನ್ನು ಗಳಿಸಲು ಮೋದಿ ಸರ್ಕಾರ ಮಾಡಿಕೊಂಡಿರುವ ಮಾರ್ಗವಾಗಿದೆ.ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಪಕ್ಷ ಅಪಾಯಕಾರಿ ಅಂಂ ಕಾಯಿದೆಯ ಜಾರಿಯನ್ನು ಬಲವಾಗಿ ವಿರೋಧಿಸುತ್ತದೆ ಮತ್ತು ಕಾಯಿದೆಯ ಅನುಷ್ಠಾನವನ್ನು ಕಾನೂನಾತ್ಮಕವಾಗಿ ಮತ್ತು ರಾಜಕೀಯವಾಗಿ ಎದಿರಿಸುವ ಪ್ರತಿಜ್ಞೆ ಮಾಡುತ್ತದೆ ಎಂದು ಹೇಳಿದ್ದಾರೆ.