Tuesday, May 20, 2025
Google search engine

Homeಸಿನಿಮಾಅಪ್ಪು ಜನ್ಮದಿನಕ್ಕೆ ಶುಭಕೋರಿದ ರಾಘವೇಂದ್ರ ರಾಜ್‌ಕುಮಾರ್‌

ಅಪ್ಪು ಜನ್ಮದಿನಕ್ಕೆ ಶುಭಕೋರಿದ ರಾಘವೇಂದ್ರ ರಾಜ್‌ಕುಮಾರ್‌

ಬೆಂಗಳೂರು: ಇಂದು ಪವರ್‌ ಸ್ಟಾರ್‌ ದಿ. ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬ. ಅವರ ಜನ್ಮದಿನವನ್ನು ಸ್ಫೂರ್ತಿ ದಿನ ಎಂದು ಆಚರಿಸಲಾಗುತ್ತದೆ. ಯುವರತ್ನನ ಜನ್ಮದಿನಕ್ಕೆ ಸಹೋದರ, ನಟ ರಾಘವೇಂದ್ರ ರಾಜ್‌ಕುಮಾರ್‌ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಶುಭಕೋರಿದ್ದಾರೆ.

ರಾಜಕೀಯ ನಾಯಕರಿಂದಲೂ ಶುಭಾಶಯ:

‘ತಮ್ಮ ಅತ್ಯುತ್ತಮ ಅಭಿನಯ ಹಾಗೂ ಹೃದಯ ಶ್ರೀಮಂತಿಕೆಯಿಂದಲೇ ಕೋಟ್ಯಂತರ ಜನರನ್ನು ಸೆಳೆದಿರುವ ಕರ್ನಾಟಕ ರತ್ನ ಡಾ. ಪುನೀತ್‌ ರಾಜ್‌ಕುಮಾರ್‌ ಅವರು ಎಂದಿಗೂ ಅಜರಾಮರ. ಕರುನಾಡಿನ ಪ್ರೀತಿಯ ಅಪ್ಪು ಅವರ ಜನ್ಮದಿನದ ಸ್ಮರಣೆಯಂದು ಕನ್ನಡ ಕಲಾಲೋಕಕ್ಕೆ ಅವರು ಸಲ್ಲಿಸಿದ ಸೇವೆ ಹಾಗೂ ಕೊಡುಗೆಗಳನ್ನು ಸ್ಮರಿಸುತ್ತಾ, ಅವರ ಆಶಯಗಳನ್ನು ಮುಂದುವರೆಸೋಣ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ಸರಳತೆಯ ರಾಯಭಾರಿ, ಕನ್ನಡ ಚಿತ್ರರಂಗದ ಮಹಾನ್ ಚೇತನ, ಪವರ್ ಸ್ಟಾರ್ ಡಾ. ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನದಂದು ಗೌರವ ನಮನಗಳು. ಸಿನಿಮಾ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ’ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪೋಸ್ಟ್‌ ಮಾಡಿದ್ದಾರೆ.

‘ಪ್ರೀತಿಯ ಅಪ್ಪು, ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರ ಜನ್ಮಸ್ಮರಣೆಯ ದಿನದಂದು ಗೌರವಪೂರ್ವಕ ನಮನಗಳು’ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇಂದು ಸ್ಫೂರ್ತಿ ದಿನ :

‘ಕನ್ನಡದ ಖ್ಯಾತ ಚಲನಚಿತ್ರ ನಟ, ಸಾಮಾಜಿಕ, ಪರಿಸರ ಕಾಳಜಿಯೊಂದಿಗೆ ಎಲ್ಲರಿಗೂ ಸ್ಫೂರ್ತಿಯಾಗಿ, ಸದಾ ಹಸನ್ಮುಖಿಯಾಗಿದ್ದ ನಮ್ಮೆಲ್ಲರ ಅಪ್ಪು ಕರ್ನಾಟಕ ರತ್ನ ಡಾ. ಪುನೀತ್‌ ರಾಜ್‌ಕುಮಾರ್‌ ಅವರ ಜನ್ಮದಿನದ ಸ್ಮರಣೆಗಳು’ ಎಂದು ರಾಜ್ಯ ಬಿಜೆಪಿ ಘಟಕ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಶುಭಕೋರಿದೆ.

RELATED ARTICLES
- Advertisment -
Google search engine

Most Popular