Tuesday, November 18, 2025
Google search engine

Homeರಾಜಕೀಯಮಂಡ್ಯ ಲೋಕಸಭೆ: ಕುತೂಹಲ ಮೂಡಿಸಿದ ಪಕ್ಷಾಂತರ ಪರ್ವ

ಮಂಡ್ಯ ಲೋಕಸಭೆ: ಕುತೂಹಲ ಮೂಡಿಸಿದ ಪಕ್ಷಾಂತರ ಪರ್ವ

ಮಂಡ್ಯ: ಪ್ರತಿ ಚುನಾವಣೆಯಂತೆ ಈ ಬಾರಿಯೂ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ತೀವ್ರ ಪೈಪೋಟಿ ಇದೆ. ಈ ವಿಷಯದಲ್ಲಿ ಬಿಜೆಪಿ ಗೌಣವಾಗಿದ್ದು, ಅಷ್ಟೊಂದು ಉತ್ಸಾಹ ಕಾಣುತ್ತಿಲ್ಲ. ಕಾರ್ಯಕರ್ತರು, ಮುಖಂಡರನ್ನು ಸೆಳೆಯುವಲ್ಲಿ ಜೆಡಿಎಸ್‌ಗಿಂತ ಕಾಂಗ್ರೆಸ್‌ ಪಕ್ಷವೇ ಒಂದು ಹೆಜ್ಜೆ ಮುಂದಿದೆ. ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌, ಬಿಜೆಪಿ ಮುಖಂಡರನ್ನು ಸೆಳೆಯಲಾಗುತ್ತಿದೆ.

ಮಂಡ್ಯದಿಂದ ಎಚ್ಡಿಕೆ ಕಣಕ್ಕಿಳಿಯುವ ಮೊದಲೇ ಜೆಡಿಎಸ್ ಗೆ ಶಾಕ್

ಮಂಡ್ಯದಿಂದ ಎಚ್ಡಿಕೆ ಚುನಾವಣಾ ಕಣಕ್ಕೆ ಇಳಿಯುವ ಮೊದಲೇ ಜೆಡಿಎಸ್ ನಾಯಕರು ಕಾಂಗ್ರೆಸ್ ಪಕ್ಷ ಸೇರುವ ಮೂಲಕ ಜೆಡಿಎಸ್ ಗೆ ಶಾಕ್ ನೀಡಿದ್ದಾರೆ. ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದ ಮರಿತಿಬ್ಬೇಗೌಡರು ಕಳೆದ ಪದವೀಧರ ಕ್ಷೇತ್ರದ ವಿಧಾನ ಪರಿಷತ್‌ ಚುನಾವಣೆ, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರು.

ವಿಧಾನ ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಅವರು ಈಗ ಅಧಿಕೃತವಾಗಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. 2015ರಲ್ಲಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಜೆಡಿಎಸ್‌ನಿಂದ ಗೆದ್ದು 2021ರಲ್ಲಿ ಸೋತಿದ್ದ ಎನ್‌.ಅಪ್ಪಾಜಿಗೌಡ ಈಗ ಕಾಂಗ್ರೆಸ್‌ ಸೇರಿದ್ದಾರೆ.

ಡಿಸಿಎಂ ಡಿಕೆಶಿ ಸಮ್ಮುಖದಲ್ಲಿ ಜೆಡಿಎಸ್ ನಾಯಕರಾದ ಮಾಜಿ ಪರಿಷತ್ ಸದಸ್ಯರಾದ ಅಪ್ಪಾಜಿಗೌಡ,ಮರಿತಿಬ್ಬೇಗೌಡ, ಜಿ.ಪಂ. ಮಾಜಿ ಸದಸ್ಯ ಯೋಗೇಶ್ ಕಾಂಗ್ರೆಸ್ ಪಕ್ಷ ಸೇರ್ಪಡೆ ಸೇರ್ಪಡೆಗೊಂಡಿರೋದು ಜೆಡಿಎಸ್ ವರಿಷ್ಟರು ಕಂಗಲಾಗಿದ್ದಾರೆ.

ಮೈತ್ರಿ ಪಕ್ಷ ಜೆಡಿಎಸ್ ಗೆ ಮಂಡ್ಯ ಬಿಟ್ಟುಕೊಟ್ಟ ಬಿಜೆಪಿ

ಮೈತ್ರಿ ಪಕ್ಷ ಜೆಡಿಎಸ್ ಗೆ ಬಿಜೆಪಿ ಮಂಡ್ಯ ಬಿಟ್ಟು ಕೊಟ್ಟಿದ್ದು, ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ರಿಂದ ಅಧಿಕೃತ ಮಾಹಿತಿ ಹೊರ ಬಂದಿದೆ. ಮಂಡ್ಯ, ಹಾಸನ, ಕೋಲಾರ ಕ್ಷೇತ್ರಗಳಲ್ಲಿ ಜೆಡಿಎಸ್ ನ ಮೈತ್ರಿ ಅಭ್ಯರ್ಥಿ ಸ್ಪರ್ಧೆ ಮಾಡಲಿದ್ದು, ಕ್ಷೇತ್ರ ಬಿಟ್ಟುಕೊಟ್ಟರು ಅಭ್ಯರ್ಥಿ ಘೋಷಣೆಗೆ ಜೆಡಿಎಸ್ ನಲ್ಲಿ ಗೊಂದಲ ಉಂಟಾಗಿರುವುದು ತಿಳಿದುಬಂದಿದೆ.

ಅಲ್ಲದೆ ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾಗಿದ್ದರಿಂದ ಸಂಸದೆ ಸುಮಲತಾ ಕ್ಷೇತ್ರವಿಲ್ಲದೆ ಅತಂತ್ರ ಸ್ಥಿತಿಯಲ್ಲಿರುವುದು, ಜೊತೆಗೆ ಮಂಡ್ಯ ಕ್ಷೇತ್ರದ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದ ಸುಮಲತಾಗೆ ನಿರಾಸೆ ಮೂಡಿರುವುದು ಮೂಡಿದೆ. ಅಲ್ಲದೆ ಸಂಸದೆ ಸುಮಲತಾರ ಮೌನ ಮುಂದಿನ ನಡೆ ಕುತೂಹಲ ಮೂಡಿಸಿದೆ.

RELATED ARTICLES
- Advertisment -
Google search engine

Most Popular