ಬೆಂಗಳೂರು: ಬಿಜೆಪಿ ಅಂದ್ರೆ ಒಂಥರಾ ವಾಷಿಂಗ್ ಮಷಿನ್ ಇದ್ದಂತೆ’ ಎಂದು ಕಾಂಗ್ರೆಸ್ ಟೀಕಿಸಿದೆ. ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ಕಂಪನಿಗಳು ಭ್ರಷ್ಟಾಚಾರದ ಆರೋಪ ಹೊತ್ತಿದ್ದರೆ ಚುನಾವಣಾ ಬಾಂಡ್ ಖರೀದಿಸುವ ಮೂಲಕ ಶುದ್ಧರಾಗಬಹುದು! ರಾಜಕಾರಣಿಗಳು ಭ್ರಷ್ಟರಾಗಿದ್ದರೆ ಬಿಜೆಪಿ ಸೇರುವ ಮೂಲಕ ಪವಿತ್ರರಾಗಬಹುದು! ಎಂದು ಲೇವಡಿ ಮಾಡಿದೆ.
ಯಾವೊಬ್ಬ ಭ್ರಷ್ಟಾಚಾರಿಯನ್ನೂ ಬಿಡುವುದಿಲ್ಲ ಎಂದಿದ್ದ ಮೋದಿಯವರು ನುಡಿದಂತೆ ನಡೆಯುತ್ತಿದ್ದಾರೆ. ಯಾವೊಬ್ಬ ಭ್ರಷ್ಟರನ್ನೂ ಬಿಡದೆ ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಮೋದಿಯವರ ಸರ್ಜಿಕಲ್ ಸ್ಟ್ರೈಕ್ ಅಮೋಘವಾದುದು!’ ಎಂದೂ ಕಾಂಗ್ರೆಸ್ ವ್ಯಂಗ್ಯವಾಡಿದೆ.