Monday, May 26, 2025
Google search engine

Homeರಾಜಕೀಯನನ್ನ ನೋವು ದೊಡ್ಡದಲ್ಲ. ಕಾಂಗ್ರೆಸ್ ಪಕ್ಷವೇ ದೊಡ್ಡದು: ಕೆ.ಹೆಚ್​.ಮುನಿಯಪ್ಪ

ನನ್ನ ನೋವು ದೊಡ್ಡದಲ್ಲ. ಕಾಂಗ್ರೆಸ್ ಪಕ್ಷವೇ ದೊಡ್ಡದು: ಕೆ.ಹೆಚ್​.ಮುನಿಯಪ್ಪ

ಬೆಂಗಳೂರು: ಮೂರನೇ ಅಭ್ಯರ್ಥಿ ಬಗ್ಗೆ ನಾನು ಯೋಚನೆ ಮಾಡಿಯೇ ಇಲ್ಲ. ಬೇರೆಯವರಿಗೆ ಟಿಕೆಟ್ ಕೊಡುತ್ತೇವೆ ಅನ್ನೋ ನಿರ್ಧಾರ ಸರಿಯಲ್ಲ. ಗೌತಮ್ ಅಂತ ಹೆಸರು ನಾನು ಹೇಳಲ್ಲ. ನಾನು ಬಹಳ ನೋವಿನಲ್ಲಿದ್ದೇನೆ, ಆದರೆ ನನ್ನ ನೋವು ದೊಡ್ಡದಲ್ಲ. ಕಾಂಗ್ರೆಸ್ ಪಕ್ಷವೇ ದೊಡ್ಡದು ಎಂದ ಸಚಿವ ಕೆ.ಹೆಚ್​.ಮುನಿಯಪ್ಪ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್ ಕಗ್ಗಂಟಾಗಿದೆ. ಕೋಲಾರ ಕ್ಷೇತ್ರದ ಟಿಕೆಟ್​ ಮೂರನೇ ವ್ಯಕ್ತಿ ಗೌತಮ ಹೆಸರು ಕೇಳಿ ಬರುತ್ತಿರುವ ವಿಚಾರವಾಗಿ ಮಾತನಾಡಿದರು.

ರಮೇಶ್​ ಕುಮಾರ್ ಬಣದವರಿಗೂ ಬೇಡ, ಮುನಿಯಪ್ಪ ಬಣದವರಿಗೂ ಬೇಡ ಅಂತ ಮೂರನೇದವರಿಗೆ ಟಿಕೆಟ್​ ನೀಡಿದರೆ, ಯಾರೂ ಕೆಲಸ ಮಾಡಲ್ಲ. ಬರುವ ಅಭ್ಯರ್ಥಿ ಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುತ್ತಾರೆ. ಮುಖ್ಯಮಂತ್ರಿಗಳು ತೆಗೆದುಕೊಳ್ಳುತ್ತಿರುವ ನಿರ್ಧಾರ ಫಲಿತಾಂಶಕ್ಕಾಗಿ ಅಲ್ಲ. ಈಗಲೂ ಕಾಲ ಮಿಂಚಿಲ್ಲ, ಚಿಕ್ಕಪೆದ್ದಣ್ಣಗೆ ಅವಕಾಶ ಕೊಟ್ಟರೆ ಗೆಲ್ಲಬಹುದು ಎಂದರು.

ಎಲ್ಲ ಕಡೆ ಸಂಧಾನ ಆಗುತ್ತೆ, ಕೋಲಾರದ್ದು ಏಕೆ ಸಂಧಾನ ಆಗುತ್ತಿಲ್ಲ. ಸಿಎಂ, ಡಿಸಿಎಂ ಅವರಿಗೆ ಸಮಸ್ಯೆ ಬಗೆಹರಿಸಬೇಕಾದ ಜವಾಬ್ದಾರಿ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಮಸ್ಯೆ ಬಗೆಹರಿಸಬೇಕಾದವರು ಸ್ವಲ್ಪ ಮನಸ್ಸು ಮಾಡಬೇಕು. ಅವರು ಸ್ವಲ್ಪ ಮನಸ್ಸು ಮಾಡಿದರೆ ಸಮಸ್ಯೆ ಬಗೆಹರಿಯುತ್ತದೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular