Saturday, June 28, 2025
Google search engine

Homeರಾಜ್ಯದ್ವಾರಕಾದಲ್ಲಿ ಶಾರ್ಟ್​ಸರ್ಕ್ಯೂಟ್ ​ನಿಂದ ಮನೆಗೆ ಬೆಂಕಿ; ಒಂದೇ ಕುಟುಂಬದ ನಾಲ್ವರು ಸಜೀವ ದಹನ

ದ್ವಾರಕಾದಲ್ಲಿ ಶಾರ್ಟ್​ಸರ್ಕ್ಯೂಟ್ ​ನಿಂದ ಮನೆಗೆ ಬೆಂಕಿ; ಒಂದೇ ಕುಟುಂಬದ ನಾಲ್ವರು ಸಜೀವ ದಹನ

ದ್ವಾರಕಾ: ಗುಜರಾತ್‌ ನ ದ್ವಾರಕಾದ ಮನೆಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್‌ ನಿಂದ ಬೆಂಕಿ ಹತ್ತಿಕೊಂಡಿದ್ದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ.

ಏಳು ತಿಂಗಳ ಹೆಣ್ಣು ಮಗು, ಪತಿ-ಪತ್ನಿ ಹಾಗೂ ಅಜ್ಜಿ ಸೇರಿ ನಾಲ್ವರು ಸಜೀವ ದಹನವಾಗಿದ್ದಾರೆ.

ಬೆಳಗಿನ ಜಾವ 3ರಿಂದ 4ಗಂಟೆಯ ನಡುವೆ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ತಗುಲಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಬೆಂಕಿಯಿಂದ ದಟ್ಟ ಹೊಗೆ ಆವರಿಸಿದ್ದರಿಂದ ಮನೆಯಲ್ಲಿದ್ದವರು ಉಸಿರುಗಟ್ಟಿ ಬೆಂಕಿಯಲ್ಲೇ ಸಜೀವದಹನವಾಗಿದ್ದಾರೆ.

ಮೃತರನ್ನು ಪವನ್ ಕಮಲೇಶ್ ಉಪಾಧ್ಯಾಯ (30 ವರ್ಷ), ಭಾವನ ಉಪಾಧ್ಯಾಯ (27 ವರ್ಷ), ಧ್ಯಾನಾ ಉಪಾಧ್ಯಾಯ (7 ತಿಂಗಳ ಬಾಲಕಿ) ಮತ್ತು ಪವನ್ ಅವರ ತಾಯಿ ಭಾಮಿನಿಬೆನ್ ಉಪಾಧ್ಯಾಯ ಎಂದು ಗುರುತಿಸಲಾಗಿದೆ.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

RELATED ARTICLES
- Advertisment -
Google search engine

Most Popular