Wednesday, June 18, 2025
Google search engine

Homeರಾಜಕೀಯ೨೦೦ ಸ್ಥಾನಗಳನ್ನು ಗೆಲ್ಲಿ : ಮಮತಾ ಬ್ಯಾನರ್ಜಿ ಬಿಜೆಪಿಗೆ ಸವಾಲು

೨೦೦ ಸ್ಥಾನಗಳನ್ನು ಗೆಲ್ಲಿ : ಮಮತಾ ಬ್ಯಾನರ್ಜಿ ಬಿಜೆಪಿಗೆ ಸವಾಲು

ಕೋಲ್ಕತ್ತಾ: ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ ೨೦೦ ಸ್ಥಾನಗಳನ್ನು ಗೆಲ್ಲಿ ಎಂದು ಮಮತಾ ಬ್ಯಾನರ್ಜಿ ಬಿಜೆಪಿಗೆ ಸವಾಲು ಎಸೆದಿದ್ದಾರೆ.
ಈ ಬಾರಿ ೪೦೦ ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹಾಕಿರುವ ಎನ್‌ಡಿಎ ಒಕ್ಕೂಟಕ್ಕೆ ನಾನು ಸವಾಲು ಎಸೆಯುತ್ತೇನೆ. ಬಿಜೆಪಿಯವರು ೪೦೦ ಪಾರ್ ಎಂದು ಹೇಳುತ್ತಿದ್ದಾರೆ. ನಾನು ಮೊದಲು ೨೦೦ ಸೀಟುಗಳ ಮಾನದಂಡವನ್ನು ದಾಟಿ ಎಂದು ಸವಾಲು ಹಾಕುತ್ತೇನೆ. ೨೦೨೧ ರ ವಿಧಾನಸಭಾ ಚುನಾವಣೆಯಲ್ಲಿ ಅವರು ೨೦೦ ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳಿದ್ದರು. ಆದರೆ ೭೭ ಸ್ಥಾನದಲ್ಲಿ ಮಾತ್ರ ಜಯಗಳಿಸಿದರು ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲು ತಾನು ಅನುಮತಿಸುವುದಿಲ್ಲ. ಸಿಎಎಗೆ ಅರ್ಜಿ ಸಲ್ಲಿಸುವುದರಿಂದ ಅರ್ಜಿದಾರರನ್ನು ವಿದೇಶಿಯನ್ನಾಗಿ ಪರಿವರ್ತಿಸುತ್ತದೆ. ಹೀಗಾಗಿ ಯಾರೂ ಅರ್ಜಿ ಸಲ್ಲಿಸಬಾರದು ಎಂದು ಮನವಿ ಮಾಡಿದರು.

RELATED ARTICLES
- Advertisment -
Google search engine

Most Popular