Saturday, May 24, 2025
Google search engine

Homeರಾಜ್ಯಸುದ್ದಿಜಾಲಅಂತರಾಷ್ಟ್ರೀಯ ಗುಣಮಟ್ಟದ ಈಜುಕೊಳದಲ್ಲಿ 21 ದಿನಗಳ ವಿಶೇಷ ಬೇಸಿಗೆ ತರಬೇತಿ ಶಿಬಿರ: ಮಂಜುನಾಥ ಸ್ವಾಮಿ

ಅಂತರಾಷ್ಟ್ರೀಯ ಗುಣಮಟ್ಟದ ಈಜುಕೊಳದಲ್ಲಿ 21 ದಿನಗಳ ವಿಶೇಷ ಬೇಸಿಗೆ ತರಬೇತಿ ಶಿಬಿರ: ಮಂಜುನಾಥ ಸ್ವಾಮಿ

ಶಿವಮೊಗ್ಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರ ಮತ್ತು ಕ್ರೀಡಾ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಕ್ರೀಡಾ ಸಂಕೀರ್ಣ ಗೋಪಾಳದ ಅಂತರರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಸಂಕೀರ್ಣದಲ್ಲಿರುವ ಈಜುಕೊಳದಲ್ಲಿ 21 ದಿನಗಳ ವಿಶೇಷ ತರಬೇತಿ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಸ್ವಾಮಿ ಮಾಹಿತಿಯನ್ನು ನೀಡಿದರು.

ಇಂದು ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಅಂತರಾಷ್ಟ್ರೀಯ ಗುಣಮಟ್ಟದ ಈಜುಕೊಳದಲ್ಲಿ 21 ದಿನಗಳ ವಿಶೇಷ ಬೇಸಿಗೆ ತರಬೇತಿ ಶಿಬಿರ ನಡೆಸುವ ಸಲುವಾಗಿ ಕರಪತ್ರ, ಬ್ಯಾನರ್‍ಗಳನ್ನು ಒಂದು ತಿಂಗಳ ಮುಂಚಿತವಾಗಿ ನಗರದ ಎಲ್ಲಾ ಕಡೆ ಅಳವಡಿಸಿ ಪ್ರಚಾರ ನೀಡಿ ತರಬೇತಿಗೆ ಪ್ರವೇಶವನ್ನು ಪಡೆಯಲಾಗುತ್ತಿದೆ.

ಮೊದಲನೇ ಶಿಬಿರವನ್ನು ಮಾರ್ಚ್ ಮಾಹೆಯಲ್ಲಿ ಯಶಸ್ವಿಯಾಗಿ ನಡೆಸಲಾಗಿದ್ದು, ಎರಡನೇ ಶಿಬಿರವನ್ನು ಏ.02 ರಿಂದ 26 ರವರೆಗೆ ಮತ್ತು ಮೂರನೇ ಶಿಬಿರವನ್ನು ಮೇ. 02 ರಿಂದ 25 ರವರೆಗೆ ಆಯೋಜಿಲಾಗಿದೆ. ಶಿಬಿರದಲ್ಲಿ 4 ವರ್ಷದಿಂದ ಎಲ್ಲಾ ವಯಸ್ಸಿನವರಿಗೆ ಈಜು ತರಬೇತಿಯನ್ನು ನೀಡಲು ಸಿದ್ಧತೆ ಮಾಡಿಕೊಂಡಿದ್ದೇವೆ. ಶಿಬಿರದಲ್ಲಿ 5 ರಿಂದ 15 ವರ್ಷದವರೆಗಿನ ಮಕ್ಕಳಿಗೆ ಸ್ಟೇಟಿಂಗ್ ತರಬೇತಿಯನ್ನು ಹಾಗೂ 6 ವರ್ಷದಿಂದ ಎಲ್ಲಾ ವಯಸ್ಸಿನವರಿಗೆ ಲಾನ್ ಟೆನ್ನಿಸ್ ತರಬೇತಿಯನ್ನು ನೀಡಲು ತಯಾರಿ ಮಾಡಿಕೊಳ್ಳಲಾಗಿದ್ದು ಎಲ್ಲಾ ತರಬೇತಿಗಳಿಗೆ ರೂ.2250/- ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದರು. ಶಿಬಿರದಲ್ಲಿ ಪಾಲ್ಗೊಳ್ಳುವ 10 ವರ್ಷದೊಳಗಿನ ಮಕ್ಕಳ ಕಡ್ಡಾಯವಾಗಿ ಬರಬೇಕಾಗಿರುತ್ತದೆ. ಶಿಬಿರದಲ್ಲಿ ವಿಶೇಷವಾಗಿ ಶುಚಿತ್ವವನ್ನು ಶಿಬಿರಾರ್ಥಿಗಳು ಮತ್ತು ಜವಾಬ್ದಾರಿಯಿಂದ ನಿರ್ವಹಿಸಿ ಯಶಸ್ಸಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಈ ತರಬೇತಿಗೆ ಒಂದು ಘಂಟೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು ಈಜು ಮತ್ತು ಸ್ಕೇಟಿಂಗ್ ತರಬೇತಿಗೆ ಆಗಮಿಸುವವರು ಕಡ್ಡಾಯವಾಗಿ ತರಬೇತಿ ಸಂಬಂಧಿಸಿದ ಬಟ್ಟೆಗಳನ್ನು ಧರಿಸುವುದು ಮತ್ತು ಟೆನ್ನಿಸ್ ತರಬೇತಿಗೆ ರಾಕೆಟ್ ಮತ್ತು ಬಾಲ್‍ಗಳನ್ನು ತರಬೇಕಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ 9743820293. ಈಜು-7019475379/ 6362200751/ 9686419812/ 9972333176.ಟೆನ್ನೀಸ್-8374335635. ಸ್ಕೇಟಿಂಗ್-7760921936 ಸಂಪರ್ಕಿಸುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ (ಪ್ರ) ರಾಜು ಆರ್, ಸಿಮ್ಮಿಂಗ್ ಕೋಚ್ ವಿಶ್ವಾಸ್, ಟೆನ್ನಿಸ್ ಕೋಚ್ ಸಂಗಮೇಶ್ ಸ್ಕೇಟಿಂಗ್ ಕೋಚ್ ರಮೇಶ್, ಮಂಜುನಾಥ, ಕೇರ್ ಟೆಕರ್ ಸಚಿನ್ ಹಾಗೂಸಿಬ್ಬಂದಿಗಳು ಇದ್ದರು.

RELATED ARTICLES
- Advertisment -
Google search engine

Most Popular