ರಾಮನಗರ: ಜಿಲ್ಲೆಯಾದ್ಯಂತ ಕಟ್ಟುನಿಟ್ಟಾಗಿ ಮಾದರಿ ನೀತಿ ಸಂಹಿತೆ ಜಾರಿಗೊಳಿಸಿದ್ದು ಏ. ೧ರ ಬೆಳಿಗ್ಗೆ ೯ ಗಂಟೆಯ ವರೆಗೆ ಒಟ್ಟು ೩೦.೯೬ಲೀ. ಮದ್ಯ ಜಿಲ್ಲೆಯ ವಿವಿಧ ಚೆಕ್‌ಪೋಸ್ಟಗಳಲ್ಲಿ ತಪಾಸಣೆ ವೇಳೆ ವಶಕ್ಕೆ ಪಡೆಯಲಾಗಿದೆ. ಅಬಕಾರಿ ಇಲಾಖೆ ಕಾರ್ಯಾಚರಣೆ ವೇಳೆ ೧೭,೫೯೭ ರೂ. ಮೌಲ್ಯದ ೨೧.೦೬ ಲೀ ಮದ್ಯ, ಒಂದು ವಾಹನ ಹಾಗೂ ಪೊಲೀಸ್ ಇಲಾಖೆ ಕಾರ್ಯಾಚರಣೆ ವೇಳೆ ೯,೯೦೦ ರೂ. ಮೌಲ್ಯದ ೯.೯೦ ಲೀ ಮದ್ಯ ವಶಕ್ಕೆ ಪಡೆದು ಪ್ರಕರಣಗಳನ್ನು ದಾಖಲಿಸಲಾಗಿದೆ.