Saturday, May 24, 2025
Google search engine

Homeರಾಜಕೀಯಭಾರತೀಯ ಪ್ರದೇಶಕ್ಕೆ ಚೀನಾ ಪ್ರವೇಶಿಸುತ್ತಿರುವಾಗ ಮೋದಿ ನಿದ್ರೆ ಗುಳಿಗೆ ಸೇವಿಸಿದ್ದರೇ? : ಮಲ್ಲಿಕಾರ್ಜುನ ಖರ್ಗೆ

ಭಾರತೀಯ ಪ್ರದೇಶಕ್ಕೆ ಚೀನಾ ಪ್ರವೇಶಿಸುತ್ತಿರುವಾಗ ಮೋದಿ ನಿದ್ರೆ ಗುಳಿಗೆ ಸೇವಿಸಿದ್ದರೇ? : ಮಲ್ಲಿಕಾರ್ಜುನ ಖರ್ಗೆ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಸುಳ್ಳುಗಳ ಸರದಾರ ಎಂದು ಟೀಕಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಭಾರತ- ಚೀನಾ ಗಡಿ ಸಂಘರ್ಷದ ಬಗ್ಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತಗೆದುಕೊಂಡಿದ್ದಾರೆ.

ರಾಜಸ್ಥಾನದ ಚಿತ್ತೋರ್ ಗಢದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಚೀನಾ ಭಾರತೀಯ ಭೂಪ್ರದೇಶವನ್ನು ಒತ್ತುವರಿ ಮಾಡಿಕೊಂಡಾಗ ನಿಷ್ಕ್ರಿಯರಾಗಿದ್ದ ಮೋದಿ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಗಾಂಧಿ ಕುಟುಂಬದ ಸದಸ್ಯರ ಮೇಲೆ ವಾಗ್ದಾಳಿ ನಡೆಸಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೋದಿ ನಿಜವಾಗಿಯೂ ೫೬ ಇಂಚಿನ ಎದೆ ಹೊಂದಿದ್ದರೆ ಮತ್ತು ಭಯ ಇಲ್ಲದಿದ್ದರೆ, ಭಾರತದ ದೊಡ್ಡ ಭೂಭಾಗವನ್ನು ಚೀನಾ ಆಕ್ರಮಿಸಿದೆ ಎನ್ನಲಾದ ಆರೋಪಕ್ಕೆ ಅವಕಾಶ ನೀಡುತ್ತಿದ್ದರೇ. ಭಾರತೀಯ ಭೂಭಾಗವನ್ನು ಚೀನಾ ಪ್ರವೇಶಿಸುತ್ತಿರುವಾಗ ಮೋದಿ ನಿದ್ರಾಗುಳಿಗೆ ಸೇವಿಸಿದ್ದರೇ ಎಂದು ಟೀಕಿಸಿದರು.

RELATED ARTICLES
- Advertisment -
Google search engine

Most Popular