ಲಕ್ನೋ: ಉತ್ತರ ಪ್ರದೇಶದಲ್ಲಿ ಈಗ ಕ್ರಿಮಿನಲ್‌ಗಳು ಜೈಲಿಗೆ ಹೋಗಲು ಭಯ ಪಡುತ್ತಿದ್ದಾರೆ ಎಂದು ಸಿಎಂ ಯೋಗಿ ಅದಿತ್ಯನಾಥ್ ಹೇಳಿದ್ದಾರೆ. ಶಂಸಾಬಾದ್‌ನಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತ ಪ್ರಚಾರ ನಡೆಸಿ ಮಾತನಾಡಿದ ಅವರು, ನಾವು ಶೂನ್ಯ ಸಹಿಷ್ಣುತೆಯ ನೀತಿಯನ್ನು ಅನುಸರಿಸುತ್ತಿದ್ದೇವೆ. ಕ್ರಿಮಿನಲ್ ವ್ಯಕ್ತಿಗಳು ಅಪರಾಧವನ್ನು ನಿಲ್ಲಿಸಬೇಕು ಅಥವಾ ಅದಕ್ಕೆ ತಕ್ಕುದಾದ ಬೆಲೆಯನ್ನು ಪಾವತಿಸಲು ಸಿದ್ಧರಾಗಬೇಕು. ಈಗ ಬಹುತೇಕ ಕ್ರಿಮಿನಲ್‌ಗಳು ಜೈಲಿಗೆ ಹೋಗಲು ಭಯಪಡುತ್ತಿದ್ದಾರೆ ಎಂದು ಹೇಳಿದರು.
೨೦೧೭ರ ಮೊದಲು ಪೊಲೀಸ್ ಠಾಣೆಗಳು ಸೂರ್ಯಾಸ್ತದ ನಂತರ ಬೀಗ ಹಾಕುತ್ತಿದ್ದವು. ಸಾಮಾನ್ಯ ಜನರು ಭಯಭೀತರಾಗಿದ್ದರು. ಉತ್ತರ ಪ್ರದೇಶದಲ್ಲಿ ಸರ್ಕಾರ ಬದಲಾಯಿತು ಆದರೆ ಅಪರಾಧಿಗಳು ಮೊದಲಿನಂತೆಯೇ ಇರುತ್ತದೆ ಎಂದು ಭಾವಿಸಿದ್ದರು. ನಾವು ನಮ್ಮ ರಾಜ್ಯದಲ್ಲಿ ಅಪರಾಧದ ಬಗ್ಗೆ ಶೂನ್ಯ ಸಹಿಷ್ಣುತೆ ನೀತಿಯನ್ನು ತಂದಿದ್ದೇವೆ. ಕ್ರಿಮಿನಲ್‌ಗಳು ಸುಧಾರಣೆಯಾಗಬೇಕು ಅಥವಾ ಅವರು ಬೆಲೆ ತೆರುವ ಆಯ್ಕೆಯನ್ನು ನೀಡಲಾಗಿದೆ ಎಂದು ಯೋಗಿ ಹೇಳಿದರು. ಈ ಹಿಂದೆ ಉತ್ತರ ಪ್ರದೇಶದಲ್ಲಿ ಆಗಾಗ ಗಲಭೆ, ಕರ್ಫ್ಯೂ ನಡೆಯುತ್ತಿತ್ತು ಆದರೆ ರಾಜ್ಯದಲ್ಲಿ ಬಿಜೆಪಿ ಆಡಳಿತ ಬಂದ ಮೇಲೆ ಇದೆಲ್ಲವನ್ನೂ ಬದಲಾವಣೆ ಮಾಡಲಾಗಿದೆ. ಈಗ ಯಾವುದೇ ಗಲಭೆಗಳಿಲ್ಲ ಮತ್ತು ಕರ್ಫ್ಯೂ ಇಲ್ಲ. ಹಬ್ಬಗಳ ಉತ್ಸವ ನಡೆಯುತ್ತಿದೆ. ಉತ್ಸವ ಪ್ರದೇಶ ಇದು ಮೋದಿಯ ಗ್ಯಾರಂಟಿ ಎಂದು ಹೇಳಿದರು.