ಮೈಸೂರು: ಲೋಕಸಭಾ ಸಾರ್ವತ್ರಿಕ ಚುನಾವಣಾ ಸಂಬoಧ ಭಾರತ ಚುನಾವಣಾ ಆಯೋಗದಿಂದ ವಿಧಾನಸಭಾ ಕ್ಷೇತ್ರಗಳಾದ ಮಡಿಕೇರಿ, ವಿರಾಜಪೇಟೆ, ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ, ಕೃಷ್ಣರಾಜ, ಚಾಮರಾಜ ಮತ್ತು ನರಸಿಂಹರಾಜ ಕ್ಷೇತ್ರಕ್ಕೆ ಚುನಾವಣಾ ಸಾಮಾನ್ಯ ವೀಕ್ಷಕರಾಗಿ ಶಾಹಿದ್ ಇಕ್ಬಾಲ್ ಚೌದ್ರಿ (ದೂ.ಸಂ 9482042877) ಹಾಗೂ ಪೋಲೀಸ್ ವೀಕ್ಷಕರಾಗಿ ಮನೋಜ್ ತಿವಾರಿ (ಮೊ.ಸಂ 9482209477) ಅವರು ನೇಮಕಗೊಂಡಿದ್ದಾರೆ
ಮಡಿಕೇರಿ, ವಿರಾಜಪೇಟೆ, ಪಿರಿಯಾಪಟ್ಟಣ, ಹುಣಸೂರು ವಿಧಾನಸಭಾ ಕ್ಷೇತ್ರಗಳಿಗೆ ಸುರೇಶ್.ಎ, (ಮೊ.ಸಂ. 9482051577) ಹಾಗೂ ಚಾಮುಂಡೇಶ್ವರಿ, ಕೃಷ್ಣರಾಜ, ಚಾಮರಾಜ ಮತ್ತು ನರಸಿಂಹರಾಜ ಕ್ಷೇತ್ರಗಳಿಗೆ ಯೋಗೀಶ್ ಮಿಶ್ರ (ಮೊ.ಸಂ 9482058477) ಅವರನ್ನು ವೆಚ್ಚ ವೀಕ್ಷಕರಾಗಿ ನೇಮಿಸಲಾಗಿದೆ
ಚುನಾವಣಾ ವೀಕ್ಷಕರಿಗೆ ಜಲದರ್ಶಿನಿ ವಸತಿ ಗೃಹದಲ್ಲಿ ವಾಸ್ಥವ್ಯದ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಯಾವುದೇ ಮನವಿ ಅಥವಾ ಅಹವಾಲುಗಳಿದ್ದಲ್ಲಿ ಮೈಸೂರು ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕರು, ವೆಚ್ಚ ವೀಕ್ಷಕರು ಮತ್ತು ಪೊಲೀಸ್ ವೀಕ್ಷಕರನ್ನು ಸಂಪರ್ಕಿಸಬಹುದೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯಾದ ಡಾ. ಕೆ.ವಿ ರಾಜೇಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.