Wednesday, May 21, 2025
Google search engine

Homeವಿದೇಶಸಮುದ್ರದಲ್ಲಿ ಮುಳುಗಿದ ದೋಣಿ: 90 ಕ್ಕೂ ಹೆಚ್ಚು ಮಂದಿ ಸಾವು, ಹಲವರು ನಾಪತ್ತೆ

ಸಮುದ್ರದಲ್ಲಿ ಮುಳುಗಿದ ದೋಣಿ: 90 ಕ್ಕೂ ಹೆಚ್ಚು ಮಂದಿ ಸಾವು, ಹಲವರು ನಾಪತ್ತೆ

ಮೊಜಾಂಬಿಕ್‌: 130 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಸಮುದ್ರದಲ್ಲಿ ಮುಳುಗಿದ ಪರಿಣಾಮ 90ಕ್ಕೂ ಹೆಚ್ಚು ಮೃತಪಟ್ಟಿದ್ದು, ಹಲವಾರು ಮಂದಿ ನಾಪತ್ತೆಯಾಗಿರುವ ಘಟನೆ ಮೊಜಾಂಬಿಕ್‌ ನ ಉತ್ತರ ಕರಾವಳಿಯಲ್ಲಿ ಸಂಭವಿಸಿದೆ.

ಸುಮಾರು 130 ಜನರನ್ನು ಹೊತ್ತ ಮೀನುಗಾರಿಕಾ ದೋಣಿ ನಾಂಪುಲಾ ಪ್ರಾಂತ್ಯದ ಬಳಿಯ ದ್ವೀಪವೊಂದಕ್ಕೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಂಪುಲಾ ರಾಜ್ಯ ಕಾರ್ಯದರ್ಶಿ ಜೈಮ್ ನೆಟೊ ನೀಡಿದ ಹೇಳಿಕೆ ಪ್ರಕಾರ ದೋಣಿಯಲ್ಲಿ ಸಾಮರ್ಥ್ಯಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸಾಗಿಸುತ್ತಿದ್ದರು ಎಂದು ಹೇಳಲಾಗಿದೆ ಇದರ ಪರಿಣಾಮ ದೋಣಿ ಸಮುದ್ರದ ಮಧ್ಯದಲ್ಲಿ ಮುಳುಗಿದೆ ಈ ವೇಳೆ ತೊಂಭತ್ತಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು ಇನ್ನೂ ಹಲವಾರು ಮಂದಿ ನಾಪತ್ತೆಯಾಗಿದ್ದಾರೆ.

ಘಟನೆ ನಡೆದ ವಿಚಾರ ತಿಳಿಯುತ್ತಲೇ ಘಟನಾ ಸ್ಥಳಕ್ಕೆ ರಕ್ಷಣಾ ತಂಡ ಧಾವಿಸಿದ್ದು ನಾಪತ್ತೆಯಾದವರ ಶೋಧ ಕಾರ್ಯ ನಡೆಸುತ್ತಿದ್ದಾರೆ, ಅಲ್ಲದೆ ರಕ್ಷಣೆ ಮಾಡಿದವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

RELATED ARTICLES
- Advertisment -
Google search engine

Most Popular