ಬೆಂಗಳೂರು: ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಬಿಜೆಪಿ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಹೇಳಿದ್ದಾರೆ.
ಇಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪ್ರಾಬಲ್ಯತೆಯನ್ನು ಪಡೆಯಲು ಕರ್ನಾಟಕದಲ್ಲಿ ೨೮ಕ್ಕೆ ೨೮ ಸ್ಥಾನಗಳನ್ನು ಗೆಲ್ಲಬೇಕಿದೆ. ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ. ಬೆಂಗಳೂರು ಗ್ರಾಮಾಂತದಲ್ಲಿ ಡಾ. ಸಿ.ಎನ್. ಮಂಜುನಾಥ್ ಅವರು ಗೆಲುವು ಕಾಣಬೇಕು. ಈ ಮೂಲಕ ಹೆಚ್ಚಿನ ಅಭಿವೃದ್ಧಿಗೆ ಅವಕಾಶವಾಗಬೇಕಿದೆ ಎಂದು ತಿಳಿಸಿದರು.
ಡಾ. ಸಿ.ಎನ್. ಮಂಜುನಾಥ್ ಅವರು ಅಭ್ಯರ್ಥಿಯಾಗುವುದನ್ನು ಡಿಕೆ ಬ್ರದರ್ಸ್ ಅಥವಾ ನಾವು ನಿರೀಕ್ಷೆ ಮಾಡಿರಲಿಲ್ಲ. ಎಲ್ಲ ಕಾಲ ಕೂಡಿ ಬಂದಿದೆ. ಪ್ರಕೃತಿಯೇ ಅವರು ಅಭ್ಯರ್ಥಿಯಾಗುವುದನ್ನು ಬಯಸಿದೆ. ಮೋದಿ ಟೀಂನಲ್ಲಿ ಜನಾಧರಿತ ಆಡಳಿತ ನೀಡಲು ಮಂಜುನಾಥ ಅವರಂಥ ಜನಪ್ರಿಯ ವ್ಯಕ್ತಿ ಬೇಕಿದೆ ಎಂದರು.