Sunday, August 17, 2025
Google search engine

Homeರಾಜಕೀಯನರೇಂದ್ರ ಮೋದಿ ಮೂರನೆ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಲಿದ್ದಾರೆ: ಪ್ರತಾಪ್ ಸಿಂಹ

ನರೇಂದ್ರ ಮೋದಿ ಮೂರನೆ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಲಿದ್ದಾರೆ: ಪ್ರತಾಪ್ ಸಿಂಹ

ಮಂಡ್ಯ: ಜೂನ್ 4 ರಂದು 543 ಲೋಕಸಭಾ ಕ್ಷೇತ್ರದ ಫಲಿತಾಂಶ ಪ್ರಕಟವಾಗಿ ನರೇಂದ್ರ ಮೋದಿ ಮೂರನೆ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಲಿದ್ದಾರೆ. ಈ ಬಗ್ಗೆ  ದೇಶದಲ್ಲಿ ಯಾರಿಗೂ ಅನುಮಾನ ಇಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಬಿಜೆಪಿ-ಜೆಡಿಎಸ್ ಮೈತ್ರಿ ಚುನಾವಣಾ ಎಸ್ಪಿ-ಎಸ್ಟಿ ಮೋರ್ಚ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 14 ರಂದು ಮೈಸೂರಿಗೆ ಮೋದಿ ಬರಲಿದ್ದಾರೆ.  ಈ ಹಿನ್ನಲೆ ಹಮ್ಮಿಕೊಂಡಿರುವ ಬೃಹತ್ ರ್ಯಾಲಿಗೆ ಮಂಡ್ಯದಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಬರಬೇಕು‌. ಎರಡೂ ಪಕ್ಷದ ಕಾರ್ಯಕರ್ತರು ತಪ್ಪದೆ ಬನ್ನಿ ಎಂದು ಆಹ್ವಾನಿಸಿದರು.

ದೇಶ ಕಾಯೋಕೆ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕು. ಕಾವೇರಿ ಕಾಯಲು ಕುಮಾರಣ್ಣನ ಕಳುಹಿಸಬೇಕು. ಮೋದಿ ಸಂಪುಟದಲ್ಲಿ ಕುಮಾರಣ್ಣ ಪ್ರಮಾಣವಚನ ಸ್ವೀಕಾರ ಮಾಡ್ತಾರೆ. ಅಲಹಾಬಾದ್ ನಲ್ಲಿ ಹುಟ್ಟಿದ ಇಂದಿರಾಗಾಂಧಿ ಇಟಲಿಯಲ್ಲಿ ಎಲೆಕ್ಷನ್ ನಿಲ್ಲಬಹುದಾ ? ಸಿದ್ದರಾಮಯ್ಯ ಬಾದಾಮಿಗೆ ಹೋಗ್ತಾರೆ. ಕಾವೇರಿಗಾಗಿ ಹೋರಾಟ ಮಾಡಿದ್ದು ದೇವೇಗೌಡ್ರು. ಅವರ ಮಗ ಹೊರಗಿನವರು ಆಗ್ತಾರಾ? ಎಂದು ಪ್ರಶ್ನೆ ಮಾಡಿದರು.

ಸಿದ್ದರಾಮಯ್ಯ ಸಿಎಂ ಆದ್ರು ರಾಜ್ಯದಲ್ಲಿ ಬರಗಾಲ ಶುರು. ಪ್ರತಿ ನಿತ್ಯ ತಮಿಳುನಾಡಿಗೆ ನೀರು ಬಿಟ್ರಿ ಒಂದು ದಿನವಾದ್ರು ಧ್ವನಿ ಎತ್ತಿದ್ದಿರಾ? ಸ್ಟಾಲಿನ್ ಜೊತೆ ಕೈ ಹಿಡಿದುಕೊಂಡು ಸ್ನೇಹ ಮಾಡ್ತಿರಾ? ರೈತರ ಹಿತಶಕ್ತಿ ಕಾಪಾಡುವ ಚಲುವರಾಯಸ್ವಾಮಿ ಒಂದು ದಿನ ಮಾತನಾಡಿದ್ದಿರಾ? ಎಂದು ಚೆಲುವರಾಯ ಸ್ವಾಮಿ ವಿರುದ್ಧ ಕಿಡಿಕಾರಿದರು.

ದೇವೇಗೌಡ್ರು ಮಗ ಮಂಡ್ಯದಲ್ಲಿ ಚುನಾವಣೆಗೆ ನಿಂತಿದ್ದಾರೆ. ಅವರ ಬಗ್ಗೆ ಮಾತನಾಡಬೇಕಾದರೆ ಎಚ್ಚರಿಕೆ ಇರಲಿ. ಸ್ಟಾರ್ ಚಂದ್ರು ಅವರದು ದುಡ್ಡು ಖಾಲಿಯಾಗುತ್ತೆ ಓಟ್ ಬೀಳಲ್ಲ. ಕುಮಾರಣ್ಣ ಈಗಾಗಲೇ ಗೆದ್ದಿದ್ದಾರೆ, ಅಂಬರೀಶ್ ನಂತರ ಈಗ ಮಂತ್ರಿ ಸ್ಥಾನ ಸಿಗುತ್ತಿದೆ‌. ದೇವೇಗೌಡ್ರು ಬಗ್ಗೆ ಮಾತನಾಡಬೇಡಿ. ದೇವೇಗೌಡ್ರು ಇಲ್ಲ ಅಂದಿದ್ರೆ ಚಲುವಣ್ಣ ಜಿ.ಪಂ.ಸದಸ್ಯ ಕೂಡ ಆಗ್ತಿರಲಿಲ್ಲ. ನಾನು ಗೆಲ್ಲಬೇಕಾದರೆ ಜೆಡಿಎಸ್ ಕಾರ್ಯಕರ್ತರು ಕೊಡುಗೆ ಕೊಟ್ಟಿದ್ದಾರೆ. ಕುಮಾರಣ್ಣ ಗೆ ನಾವೇಲ್ಲರು ಗೆಲ್ಲಿಸಿ ಕೊಡಬೇಕು. ಪುಟ್ಟರಾಜು ಅವರು ನನ್ನ ತಮ್ಮನ ರೀತಿಯಲ್ಲಿ ನೋಡಿಕೊಂಡಿದ್ದಾರೆ ಎಂದು ಹೇಳಿದರು.

ಒಕ್ಕಲಿಗರಿಗೆ ಬಿಜೆಪಿಯಲ್ಲಿ ಅನ್ಯಾಯ ಆಗಿದೆ ಅಂತ ಚರ್ಚೆಯಾಗ್ತಿದೆ. ಯಾವ ಕಾರಣಕ್ಕೆ ನೀವು ಒಕ್ಕಲಿಗರಿಗೆ ನಾಯಕತ್ವ ಕೊಡಲಿಲ್ಲ. ಒಕ್ಕಲಿಗರ ಸ್ವಾಮಿಜಿ ಬಗ್ಗೆ ಗೌರವ ಕೊಡುವ ರೀತಿ ನಿಮಗೆ ಗೊತ್ತಿಲ್ಲ. ಕೆಪಿಸಿಸಿ ಅಧ್ಯಕ್ಷರು ಮುಖ್ಯಮಂತ್ರಿಯಾಗುವ ವಾಡಿಕೆ ಇದೆ. ಡಿಕೆಶಿ ಪಕ್ಷ ಸಂಘಟನೆ ಮಾಡಿ ಹೋರಾಟ ಮಾಡಿ ದೊಡ್ಡ ಪಾತ್ರ ವಹಿಸಿದ್ದರು. ದುಡ್ಡು ಖರ್ಚು ಮಾಡಿ ಹೋರಾಟ ಮಾಡಿದ್ದು ಅವರು ಅವರಿಗೆ ಯಾಕೆ ಮುಖ್ಯಮಂತ್ರಿ ಮಾಡಲಿಲ್ಲ. ಯಾಕೆ ಒಕ್ಕಲಿಗರ ಮೇಲೆ ಪ್ರೀತಿ ಇಲ್ಲ. ಸಿದ್ದರಾಮಯ್ಯ ಮಾತಿಗೆ ಯಾರು ಮರಳಾಗಬೇಡಿ ಎಂದು ಹೇಳಿದರು.

ದೇವೇಗೌಡ್ರು ಜೆಡಿಎಸ್ ಪಕ್ಷ ಕಟ್ಟಿ ಉಳಿಸಿಕೊಂಡು ಬಂದಿದ್ದಾರೆ ಇವತ್ತು ದೊಡ್ಡ ಶಕ್ತಿಯಾಗಿದೆ‌. ಜೆಡಿಎಸ್ ಪಕ್ಷ ಎಷ್ಟು ಜನ ಒಕ್ಕಲಿಗರಿಗೆ ಅವಕಾಶ ಕೊಟ್ಟಿದೆ. ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರನ್ನು ಬೆಳೆಸಿದ್ದು ದೇವೇಗೌಡ್ರು ಜೆಡಿಎಸ್ ಪಕ್ಷ. ದೇವೇಗೌಡ್ರು ಬಗ್ಗೆ ಮಾತನಾಡಬೇಡಿ ಒಕ್ಕಲಿಗರ ನಾಯಕ ದೇವೇಗೌಡ್ರು. ತಂತ್ರಗಾರಿಕೆ ಮಾಡಿದರು ಒಕ್ಕಲಿಗರನ್ನ ದಾರಿ ತಪ್ಪಿಸಲು ಆಗಲ್ಲ‌. ಹಿರಿಯ ರಾಜಕಾರಣಿಗಳ ಬಗ್ಗೆ ಹಿಯಾಳಿಸುವುದನ್ನ ಮಾತನಾಡುವುದನ್ನ ಬಿಡಿ. ಸಿದ್ದರಾಮಯ್ಯ ದೊಡ್ಡ ನಾಯಕರಾಗಿ ಬೆಳೆದಿದ್ದಾರೆ ಅವರ ಊರಿನಲ್ಲಿ ಬೆಳೆಸಿದವರು ಒಕ್ಕಲಿಗರ ಸಮಾಜದವರು. ಒಕ್ಕಲಿಗರಿಗೆ ಹೆಚ್ಚು ಗೌರವ ಸಿಕ್ಕಿರೋದು ಜೆಡಿಎಸ್ ನಂತರ ಬಿಜೆಪಿಯಲ್ಲಿ ಮಾತ್ರ ಎಂದರು.

RELATED ARTICLES
- Advertisment -
Google search engine

Most Popular