ಮಂಡ್ಯ: ಕುಮಾರಸ್ವಾಮಿ ಒಬ್ಬ ದರೋಡೆಕೋರ ಎಂದು ಮದ್ದೂರು ಶಾಸಕ ಕದಲೂರು ಉದಯ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮದ್ದೂರು ತಾಲೂಕಿನ ಚಿಕ್ಕರಸಿನಕೆರೆಯಲ್ಲಿ ಮದ್ದೂರು ಕೈ ಶಾಸಕ ಕದಲೂರು ಉದಯ್ ಮಾತನಾಡಿದರು.
ಕುಮಾರಸ್ವಾಮಿ ಒಬ್ಬ ದೊಡ್ಡ ದರೋಡೆಕೋರ. ಮನೆ ಮನೆ ಸುತ್ತೋಕೆ ನಮ್ಮ ರೀತಿ ಏನು ಬಡವರ ಮಕ್ಕಳ ಕುಮಾರಸ್ವಾಮಿ.? ಮಹರಾಜನ ವಂಶಸ್ಥರು ಅಲ್ಲೆಲ್ಲೋ ಬಂದು ಮೈನ್ ರೋಡಲ್ಲಿ ಕೈ ಬೀಸಿ ಹೋಗ್ತಾರೆ. ಮಂಡ್ಯ ಹಾಗೂ ಕಾವೇರಿಗೆ ಅವ್ರ ಕೋಡುಗೆ ಏನು ಇಲ್ಲಾ ಎಂದು ಹೇಳಿದರು.
ಸಿಎಂ ಆಗಿದ್ದಾಗಲೇ ಏನು ಮಾಡಲಿಲ್ಲ ಈಗ ಎಂಪಿ ಆಗಿ ಏನ್ ಮಾಡಿಬಿಡ್ತಾರೆ. ನಮ್ಮ ಜಿಲ್ಲೆ ಜನರ ಬದುಕು ಕಟ್ಟಿಕೊಡ್ತಿನಿ ಅಂತಾರೆ ನಮ್ ಜನ ಏನ್ ನಿರ್ಗತಿಕರಾ? ಇವ್ರೆ ಅವರಿವರ ಬಳಿ ಬೇಡಿ ಬದುಕ್ತಿದ್ದಾರೆ ಎಂದು ಕಿಡಿಕಾರಿದರು.
ಈ ವೇಳೆ ತಮಿಳುನಾಡಿಗೆ ನೀರು ಹರಿಸಿ ರೈತರಿಗೆ ಅನ್ಯಾಯ ಮಾಡಿದ್ದಾರೆಂದು ವಿಜಯೇಂದ್ರ ಗಂಡಸ್ತನದ ಮಾತನಾಡಿದರು.ಇದಕ್ಕೆ ಇವರ ಅಪ್ಪ ಎರಡು ಬಾರಿ ಸಿಎಂ ಆಗಿದ್ದರು.ಆ ವೇಳೆ ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದಾರೆಂದರು ಪ್ರಶ್ನಿಸಿದರು.ಇನ್ನೂ ಮಾಜಿ ಜಿ.ಪಂ.ಅಧ್ಯಕ್ಷ ಗುರುಚರಣ್ ಕಾಂಗ್ರೆಸ್ ಹೈಕಮಾಂಡ್ ನಾಯಿ ಬಿಸ್ಕೆಟ್ ಹಾಕಿ ರಾಜ್ಯದ ನಾಯಕರನ್ನು ಇಟ್ಟುಕೊಂಡಿದ್ದಾರೆ.ಇದರಿಂದ ನಮ್ಮ ದೊಡ್ಡಪ್ಪ ಎಸ್ ಎಂ ಕೃಷ್ಣ ಪಕ್ಷದಿಂದ ಹೊರಗೆ ಬಂದರು ಎಂದಿದಕ್ಕೆ ಕೌಂಟರ್ ಕೊಟ್ಟ ಶಾಸಕ ಉದಯ್ ಇವರು ಕೂಡ ಬಿಸ್ಕೆಟ್ ತಿಂದು ಹೋರ ಹೋಗಿದ್ದಾರಾ ಅಂತಾ ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಕುಮಾರಸ್ವಾಮಿ ಒಬ್ಬ ದರೋಡೆಕೋರ ಎಂದು ಮತ್ತೆ ವಿವಾದಾತ್ಮಕ ಹೇಳಿಕೆ ಕೊಟ್ಟರು.ಕುಮಾರಸ್ವಾಮಿ ಒಬ್ಬ ದೊಡ್ಡ ದರೋಡೆಕೋರ.ಮನೆ ಮನೆ ಸುತ್ತೋಕೆ ನಮ್ಮ ರೀತಿ ಏನು ಬಡವರ ಮಕ್ಕಳ ಕುಮಾರಸ್ವಾಮಿ.ಮಹಾರಾಜನ ವಂಸಸ್ಥರು ಅಲ್ಲೆಲ್ಲೋ ಬಂದು ಮೇನ್ ರೋಡಲ್ಲಿ ಕೈ ಬೀಸಿ ಹೋಗ್ತಾರೆ.ಮಂಡ್ಯ ಹಾಗೂ ಕಾವೇರಿಗೆ ಅವ್ರ ಕೋಡುಗೆ ಏನು ಇಲ್ಲಾ.ಸಿಎಂ ಆಗಿದ್ದಾಗಲೇ ಏನು ಮಾಡಲಿಲ್ಲ ಈಗ ಎಂಪಿ ಆಗಿ ಏನ್ ಮಾಡಿಬಿಡ್ತಾರೆ.ನಮ್ಮ ಜಿಲ್ಲೆ ಜನರ ಬದುಕು ಕಟ್ಟಿಕೊಡ್ತಿನಿ ಅಂತಾರೆ ನಮ್ ಜನ ಏನ್ ನಿರ್ಗತಿಕರಾ?ಇವ್ರೆ ಅವರಿವರ ಬಳಿ ಬೇಡಿ ಬದುಕ್ತಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಮಧುಜಿ ಮಾದೇಗೌಡ ಮಾಜಿ ಸದಸ್ಯ ಬಿ ರಾಮಕೃಷ್ಣರವರು ಪ್ರಚಾರ ಕಾರ್ಯದಲ್ಲಿ ತೊಡಗಿರುವ ಬಗ್ಗೆ ಮಾತನಾಡಿದ ಅವರು ನಮ್ಮಲ್ಲಿ ಯಾವುದೇ ಮನಸ್ತಾಪವಿಲ್ಲ. ನಾನು ಪಕ್ಷದ ಶಾಸಕನಾಗಿ ಕೆಲಸ ಮಾಡ್ತಿದ್ದೇನೆ. ಪಕ್ಷಕ್ಕೆ ನಿಷ್ಠಾವಂತನಾಗಿದ್ದೇನೆ ಅವರು ಅವರ ಕರ್ತವ್ಯವನ್ನು ಮಾಡಲಿ ಎಂದು ಬೇಸರ ವ್ಯಕ್ತಪಡಿಸಿದರು.