Sunday, May 25, 2025
Google search engine

Homeರಾಜಕೀಯಶಾಸಕರಾಗಿ ಆಯ್ಕೆಯಾದ ಬಳಿಕ 6ನೇ ಬಾರಿ ವಿದೇಶಕ್ಕೆ ತೆರಳಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ

ಶಾಸಕರಾಗಿ ಆಯ್ಕೆಯಾದ ಬಳಿಕ 6ನೇ ಬಾರಿ ವಿದೇಶಕ್ಕೆ ತೆರಳಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ

ಮಂಡ್ಯ: ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಶಾಸಕರಾಗಿ ಆಯ್ಕೆಯಾದ 11 ತಿಂಗಳಲ್ಲಿ 6ನೇ ಬಾರಿ ವಿದೇಶಕ್ಕೆ ತೆರಳಿದ್ದಾರೆ. ಪದೇ ಪದೇ ವಿದೇಶಕ್ಕೆ ಹಾರುತ್ತಿರುವುದು ಕ್ಷೇತ್ರದ ಮತದಾರರಲ್ಲಿ ಬೇಸರ ಉಂಟು ಮಾಡಿದೆ.

ಲೋಕಸಭೆ ಚುನಾವಣೆ ಏ.26ರಂದು ಮತದಾನ ದಿನದಂದು ತಾಲೂಕಿನ ಸ್ವಗ್ರಾಮ ಕ್ಯಾತನಹಳ್ಳಿ ಸರ್ಕಾರಿ ಶಾಲೆಯಲ್ಲಿ ಮತ ಚಲಾಯಿಸಿ, ನಂತರ ಕ್ಷೇತ್ರಾದ್ಯಂತ ಪ್ರವಾಸ ನಡೆಸಿ, ಚುನಾವಣೆ ಮತದಾನ ಮುಗಿದ ತಕ್ಷಣ ಸ್ವಗ್ರಾಮ ಬಿಟ್ಟು, ಬೆಂಗ ಳೂರು ಮೂಲಕ ವಿದೇಶಕ್ಕೆ ಹಾರಿದ್ದಾರೆ.

ಮುಂದಿನ ಮೇ ತಿಂಗಳು ಎರಡು ಅಥವಾ ಮೂರನೇ ವಾರದಲ್ಲಿ ವಾಪಸ್ಸು ತವರಿಗೆ ಬರಬಹುದು ಎನ್ನುತ್ತಿದ್ದಾರೆ. ಚುನಾವಣೆಯಲ್ಲಿ ಕೆಲಸ ನಿರ್ವಹಿಸಿದ ರೈತಸಂಘ ಹಾಗೂ ಕಾಂಗ್ರೆಸ್ ಕಾರ್ಯ ಕರ್ತರಿಗೆ ವಿಡಿಯೋ ಮೂಲಕ ಕೃತಜ್ಞತೆ ಸಲ್ಲಿಸಿ, ವಿದೇಶಕ್ಕೆ ತೆರಳಿದ್ದಾರೆ.

RELATED ARTICLES
- Advertisment -
Google search engine

Most Popular