ಹುಮನಾಬಾದ: ಲೋಕಸಭಾ ಚುನಾವಣೆ ನಿಮಿತ್ಯ ಚಿಟಗುಪ್ಪ ತಾಲೂಕಿನ ಕೂಡಂಬಲ ಗ್ರಾಮದ ಹೊರವಲಯದ ಚೆಕ್ಪೋಸ್ಟ್ ನಲ್ಲಿ ಎಸ್.ಎಸ್.ಟಿ ತಂಡದಲಿ ಕಾರ್ಯ ನಿರ್ವಹಿಸುತ್ತಿದ್ದ ಕೃಷಿ ಇಲಾಖೆ ನೌಕರ ಸೋಮವಾರ ಮಧ್ಯಾಹ್ನ ಹೃದಯ ಘಾತದಿಂದ ಮೃತಪಟ್ಟಿದ್ದಾರೆ.
ಚಿಟಗುಪ್ಪ ಪಟ್ಟಣದ ನಿವಾಸಿ ಆನಂದ್ ಲಕ್ಷ್ಮಣ ಮೃತಪಟ್ಟ ಅಧಿಕಾರಿ. ನಿರ್ಣಾ ಗ್ರಾಮದ ಆರ್.ಎಸ್.ಕೆ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಚುನಾವಣಾ ನೀತಿ ಸಹಿಂತೆ ಜಾರಿಯಾದ ನಂತರ ಕೊಡಂಬಲ್ ಚೆಕ್ ಪೋಸ್ಟ್ ನಲ್ಲಿ ಬೆಳಿಗ್ಗೆ 8 ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ ಕರ್ತವ್ಯ ನಿರ್ವಹಿಸುತ್ತಿದ್ದು, ಬಿಸಿಲಿನ ತಾಪ ಹೆಚ್ಚಾಗಿ ಸೋಮವಾರ ಮಧ್ಯಾಹ್ನ ಆರೋಗ್ಯ ಸಮಸ್ಯೆ ಕಂಡು ಬಂದ ಹಿನ್ನಲ್ಲೆಯಲ್ಲಿ ಚಿಟಗುಪ್ಲ ಆಸ್ಪತ್ರೆಗೆ ತೆರಳುವ ಮಾರ್ಗದಲ್ಲಿಯೇ ಮೃತಪಟ್ಟಿದ್ದಾರೆ.
ಪ್ರಾಥಮಿಕ ವರದಿಯ ಪ್ರಕಾರ ಹೃದಯಘಾತದಿಂದ ಮೃತಪಟ್ಟಿರಬೇಕು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಸಂಬಂಧಪಟ್ಟ ಅಧಿಕಾರಿಗಳಿಂದ ಲಭ್ಯ ಆಗಬೇಕಿದೆ.