Saturday, May 24, 2025
Google search engine

Homeಸ್ಥಳೀಯವಸತಿ ಮತ್ತು ವಾಣಿಜ್ಯ ಸ್ಥಳಗಳಲ್ಲಿ ಆಹ್ಲಾದಕರ ವಾತಾವರಣ ಸೃಷ್ಟಿಸಲು ಪಾಲುದಾರಿಕೆ

ವಸತಿ ಮತ್ತು ವಾಣಿಜ್ಯ ಸ್ಥಳಗಳಲ್ಲಿ ಆಹ್ಲಾದಕರ ವಾತಾವರಣ ಸೃಷ್ಟಿಸಲು ಪಾಲುದಾರಿಕೆ

ಮೈಸೂರು: ಎನ್‌ಆರ್ ಗ್ರೂಪ್‌ನ ಅಧೀನ ಸಂಸ್ಥೆ ರಿಪ್ಪಲ್ ಫ್ರಾಗ್ರೆನ್ಸಸ್ ಜನರ ಜೀವನ ಅನುಭವವನ್ನು ಹೆಚ್ಚಿಸಲು ನಕ್ಷಾ ಬಿಲ್ಡರ್ಸ್ ಜೊತೆಗೆ ಸಹಯೋಗ ಮಾಡಿಕೊಂಡಿದೆ. ಈ ಸಹಯೋಗದ ಮೂಲಕ ನಗರದಾದ್ಯಂತ ಇರುವವಸತಿ ಮತ್ತು ವಾಣಿಜ್ಯ ಸ್ಥಳಗಳ ವಾತಾವರಣವನ್ನು ಬದಲಾವಣೆ ಮಾಡಲಾಗುತ್ತದೆ. ನಕ್ಷಾ ಬಿಲ್ಡರ್ಸ್ ನ ಪ್ರಾಪರ್ಟಿಗಳಲ್ಲಿ ಇರುವ ಕುಟುಂಬಗಳು ಮತ್ತು ಸಂಸ್ಥೆಗಳಲ್ಲಿಸುಗಂಧಯುಕ್ತ ಆಹ್ಲಾದಕರ ವಾತಾವರಣವನ್ನು ಸೃಷ್ಟಿ ಮಾಡಲಾಗುತ್ತದೆ.

ಈ ಸಹಯೋಗದ ಭಾಗವಾಗಿ ರಿಪ್ಪಲ್ ಫ್ರಾಗ್ರೆನ್ಸಸ್ ತನ್ನ ಜನಪ್ರಿಯ ಲಿಯಾ ಏರ್ ಕೇರ್ ಮತ್ತು ಐರಿಸ್ ಹೋಮ್ ಫ್ರಾಗ್ರೆನ್ಸಸ್ ನ ಉತ್ಪನ್ನಗಳನ್ನು ಸ್ಥಳಗಳಿಗೆ ತಕ್ಕಂತೆ ಸಂಯೋಜನೆ ಮಾಡಿ ಒದಗಿಸುತ್ತದೆ ಮತ್ತುಪರಿಮಳಯುಕ್ತ ವಾತಾವರಣ ಉಂಟು ಮಾಡುತ್ತದೆ. ಹೊಸದಾಗಿ ನಿರ್ಮಿಸಲಾದ ವಸತಿ ಮತ್ತು ವಾಣಿಜ್ಯ ಸ್ಥಳಗಳಲ್ಲಿ ಈ ಸುಗಂಧ ದ್ರವ್ಯಗಳನ್ನು ಬಳಸವ ಮೂಲಕ ಅಲ್ಲಿನ ನಿವಾಸಿಗಳು ಮತ್ತು ಉದ್ಯೋಗಿಗಳಿಗೆ ವಿಶಿಷ್ಟ ಅನುಭವ ಒದಗಿಸಲಾಗುತ್ತದೆ.

ರಿಪ್ಪಲ್ ಫ್ರಾಗ್ರೆನ್ಸಸ್ ನ ಬ್ರ್ಯಾಂಡಿಂಗ್ ಉಪಕ್ರಮ ಮೇಕ್ ಇಂಡಿಯಾ ಸ್ಮೆಲ್ ಗುಡ್ ಭಾಗವಾಗಿ ಈ ಸಹಯೋಗವು ಏರ್ಪಟ್ಟಿದ್ದು, ಈ ಉಪಕ್ರಮವು ದೇಶದಾದ್ಯಂತ ಸ್ವಚ್ಛ ಮತ್ತು ಪರಿಮಳಯುಕ್ತ ವಾತಾವರಣ ಸೃಷ್ಟಿಸುವ ಗುರಿ ಹೊಂದಿದೆ. ನಕ್ಷಾ ಬಿಲ್ಡರ್ಸ್ ಪ್ರಸಕ್ತ ಹಣಕಾಸು ವರ್ಷದಲ್ಲಿ ೨೦೦ಕ್ಕೂ ಹೆಚ್ಚು ಯೋಜನೆಗಳನ್ನು ವಾಣಿಜ್ಯೀಕರಣಗೊಳಿಸಲು ಯೋಜಿಸುತ್ತಿದ್ದು, ಈ ಪಾಲುದಾರಿಕೆಯು ಉಪಕ್ರಮದ ಯಶಸ್ಸಿಗೆ ಮಹತ್ತರ ಕೊಡುಗೆ ನೀಡಲಿದೆ.

ರಿಪ್ಪಲ್ ಫ್ರಾಗ್ರೆನ್ಸಸ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮಾಸ್ಟರ್ ಫ್ರಾಗ್ರೆನ್ಸ್ ಕ್ರಿಯೇಟರ್ ಶ್ರೀ ಕಿರಣ್ ರಂಗಾ ಅವರು, “ಮೈಸೂರಿನ ಹೆಸರಾಂತ ನಿರ್ಮಾಣ ಕಂಪನಿನಕ್ಷಾ ಬಿಲ್ಡರ್ಸ್ ಜೊತೆ ಪಾಲುದಾರಿಕೆ ಮಾಡಿದ್ದು ಸಂತೋಷ ತಂದಿದೆ. ನಕ್ಷಾ ಬಿಲ್ಡರ್ಸ್ ನಿರ್ಮಿಸಿದ ಹೊಸ ಮನೆಗಳಿಗೆ ಪ್ರವೇಶಿಸುವವ ನಮ್ಮ ಗ್ರಾಹಕರಿಗೆ ಲಿಯಾ ಏರ್ ಕೇರ್ ಮತ್ತು ಐರಿಸ್ ಹೋಮ್ ಫ್ರಾಗ್ರೆನ್ಸಸ್ ನ ಸುಗಂಧಗಳ ಮೂಲಕ ಸಂತೋಷ ನೀಡುವುದು ನಮ್ಮ ಗುರಿಯಾಗಿದೆ” ಎಂದು ಹೇಳಿದರು.

ನಕ್ಷಾ ಬಿಲ್ಡರ್ಸ್‌ನ ಸಿಇಓ ಪಿ ವಿನಯ್ ಶಂಕರ್,”ಈ ಸಹಯೋಗದ ಮೂಲಕ ನಮ್ಮ ನಕ್ಷಾ ಪ್ರಾಪರ್ಟೀಸ್ ನ ಗ್ರಾಹಕರಿಗೆ ಆನಂದದಾಯಕ ಭಾವವನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ಈ ಪಾಲುದಾರಿಕೆ ಜನರ ಜೀವನದ ಗುಣ ಮಟ್ಟ ಹೆಚ್ಚಿಸಲಿದೆ” ಎಂದು ಹೇಳಿದರು.

RELATED ARTICLES
- Advertisment -
Google search engine

Most Popular