Thursday, May 29, 2025
Google search engine

Homeರಾಜ್ಯಹುಬ್ಬಳ್ಳಿ: ಒಂದೇ ಕುಟುಂಬದ 96 ಸದಸ್ಯರಿಂದ ಮತದಾನ

ಹುಬ್ಬಳ್ಳಿ: ಒಂದೇ ಕುಟುಂಬದ 96 ಸದಸ್ಯರಿಂದ ಮತದಾನ

ಹುಬ್ಬಳ್ಳಿ: ಒಂದೇ ಕುಟುಂಬದ ತೊಂಬತ್ತಾರು ಸದಸ್ಯರು ಜೊತೆಯಾಗಿ ಮತದಾನದ ಹಕ್ಕನ್ನು ಚಲಾಯಿಸಿದರು.

ನೋಲ್ವಿ ಗ್ರಾಮದ ಕೊಪ್ಪದ ಕುಟುಂಬಸ 96 ಮಂದಿ ಜೊತೆಯಾಗಿ ಮತದಾನ ಮಾಡಿದರು. 56, 57 ಮತಗಟ್ಟೆಗಳಲ್ಲಿ ಕುಟುಂಬಸ್ಥರು ಮತದಾನ ಮಾಡಿದರು.

ಕುಟುಂಬಸ್ಥರೆಲ್ಲರೂ ಏಕಕಾಲಕ್ಕೆ ಆಗಮಿಸಿ ಮತದಾನ ಮಾಡಿ ಗಮನ ಸೆಳೆದರು. ಕುಟುಂಬದ ಹಿರಿಯರಾದ ಕಂಟೆಪ್ಪ ಕೊಪ್ಪದ, ಸಹದೇವಪ್ಪ ಕೊಪ್ಪದ, ಫಕೀರವ ಕೊಪ್ಪದ ಸೇರದಂತೆ 96 ಜನ ಏಕಕಾಲಕ್ಕೆ ಮತದಾನ ಮಾಡಿದರು.

ಇದೇ ರೀತಿ 3 ವಿಧಾನಸಭೆ, 2 ಲೋಕಸಭಾ ಚುನಾವಣೆಗೆ ಬರುತ್ತಿದ್ದೇವೆ.  ಕುಟುಂಬದಲ್ಲಿ ಮೂರು ಜನ ಯುವ ಮತದಾರರು ಇದ್ದಾರೆ ಎಂದು ಕುಟುಂಬಸ್ಥರು ಹೇಳಿದರು.

RELATED ARTICLES
- Advertisment -
Google search engine

Most Popular