Friday, May 23, 2025
Google search engine

Homeರಾಜ್ಯಸುದ್ದಿಜಾಲಜಂತುಹುಳು ನಿರ್ಮೂಲನೆಗೆ ಆಲ್‌ಬೆಂಡಜೋಲ್ ಮಾತ್ರೆ ಸೇವಿಸಿ: ಡಾ. ಉಮಾ

ಜಂತುಹುಳು ನಿರ್ಮೂಲನೆಗೆ ಆಲ್‌ಬೆಂಡಜೋಲ್ ಮಾತ್ರೆ ಸೇವಿಸಿ: ಡಾ. ಉಮಾ

ರಾಮನಗರ: ಜಂತುಹುಳು ನಿರ್ಮೂಲನೆಗೆ ಆಲ್‌ಬೆಂಡಜೋಲ್ ಮಾತ್ರೆಗಳನ್ನು ೧ ರಿಂದ ೧೯ ವ?ದೊಳಗಿನ ಮಕ್ಕಳಿಗೆ ಉಚಿತವಾಗಿ ವಿತರಿಸಲಾಗುತ್ತದೆ, ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡೆಯುವಂತೆ ರಾಮಬಗರ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಉಮಾ ಅವರು ತಿಳಿಸಿದರು.

ಅವರು ಮೇ.೧೩ರ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಾಮನಗರದ ಮೆಹಬೂಬ್ ನಗರದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ೨ನೇ ಹಂತದ ರಾಷ್ಟ್ರೀಯ ಜಂತುಹುಳು ನಿರ್ಮೂಲನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆಲ್‌ಬೆಂಡಜೋಲ್ ಮಾತ್ರೆ ಮಕ್ಕಳಲ್ಲಿ ರಕ್ತಹೀನತೆ ತಡೆಗಟ್ಟುತ್ತದೆ, ಪೌಷ್ಠಿಕಾಂಶದ ವೃದ್ದಿ, ಏಕಾಗ್ರತೆ, ಕಲಿಯುವ ಸಾಮರ್ಥ್ಯ ಉತ್ತಮಗೊಳಿಸುವುದರೊಂದಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಆದ ಕಾರಣ ಎಲ್ಲಾ ಮಕ್ಕಳು ಈ ಮಾತ್ರೆಯನ್ನು ಸೇವಿಸಿ ಸದೃಢರಾಗುವಂತೆ ಅವರು ಕರೆ ನೀಡಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಅರ್ಪಿತ ಮಾತನಾಡಿ, ಆಹಾರವನ್ನು ತಯಾರಿಸುವ ಹಾಗೂ ಸೇವಿಸುವ ಮೊದಲು ಸಾಬೂನಿನಿಂದ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು, ಕೈಗಳಲ್ಲಿನ ಉಗುರುಗಳನ್ನು ಕತ್ತರಿಸಿ ಸ್ವಚ್ಛಗೊಳಿಸಿಕೊಳ್ಳಬೇಕು, ಬರಿಗಾಲಿನಲ್ಲಿ ಓಡಾಡದೇ ಚಪ್ಪಲಿಗಳನ್ನು ಬಳಸಬೇಕು, ಬಯಲಿನಲ್ಲಿ ಮಲವಿಸರ್ಜನೆ ಮಾಡದಿರುವುದು, ಶೌಚಾಲಯವನ್ನು ಬಳಸಿದ ನಂತರ ಸಾಬೂನಿನಿಂದ ಕೈಗಳನ್ನು ಸ್ವಚ್ಛವಾಗಿ ತೊಳೆಯುವುದರಿಂದ ಜಂತು ಹುಳು ಬಾದೆಯನ್ನು ತಡೆಗಟ್ಟಬಹುದು ಎಂದರು.

ವೈದ್ಯಾಧಿಕಾರಿ ಡಾ. ಹರ್ಷಿತ್ ಮಾತನಾಡಿ, ೧ ರಿಂದ ೨ ವರ್ಷದ ಮಕ್ಕಳಿಗೆ ಅರ್ಧ ಆಲ್‌ಬೆಂಡಜೋಲ್ (೨೦೦ ಮಿ.ಗ್ರಾ) ಮಾತ್ರೆಯನ್ನು ೨ ರಿಂದ ೧೯ ವರ್ಷದ ಮಕ್ಕಳಿಗೆ ಆಲ್‌ಬೆಂಡಜೋಲ್ (೪೦೦ ಮಿ.ಗ್ರಾ) ಮಾತ್ರೆಯನ್ನು ನೀಡಲಾಗುವುದು ಎಂದರು. ಈ ಸಂದರ್ಭದಲ್ಲಿ ಫ್ಲೋರೋಸಿಸ್ ಘಟಕದ ಬಾಬು, ಎನ್.ಡಿ.ಡಿ ಸಂಯೋಜಕ ಪುರು ತ್ತಮ್, ಆರ್.ಬಿ.ಎಸ್.ಕೆ ಆಶಾ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಉಮಾ, ಆಶಾ ಮೇಲ್ವಿಚಾರಕರು ಮತ್ತು ಆರೋಗ್ಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು ಹಾಗೂ ಫಲಾನುಭವಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular