ಬೆಂಗಳೂರು: ಸಂತ್ರಸ್ತೆಯನ್ನು ಅಪಹರಿಸಿದ ಪ್ರಕರಣದಲ್ಲಿ ಬಂಧನದಲ್ಲಿರುವ ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣ ಅವರಿಗೆ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ. ಇಂದು ಸೋಮವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎಚ್.ಡಿ ರೇವಣ್ಣವನ್ನು ಅವರಿಗೆ ಜಾಮೀನು ನೀಡಿ ಆದೇಶ ಹೊರಡಿಸಿದೆ. ರೇವಣ್ಣ ಅವರು ನಾಳೆ ಮೇ ೧೪ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ಕೋರ್ಟ್‌ನ ಷರತ್ತುಗಳೇನು: ಇಬ್ಬರ ಶ್ಯೂರಿಟಿ, ೫ ಲಕ್ಷ ರೂಪಾಯಿ ಬಾಂಡ್ ನೀಡುವಂತೆ ಸೂಚನೆ ಸಾಕ್ಷ್ಯಾಧಾರ ನಾಶಪಡಿಸಬಾರದು ಎಸ್‌ಐಟಿ ತನಿಖೆಗೆ ಸಹಕರಿಸಬೇಕು, ಕೆ.ಆರ್.ನಗರ ತಾಲೂಕು ಪ್ರವೇಶಿಸುವಂತಿಲ್ಲ
ಎಸ್‌ಐಟಿ ಬಂಧನದ ಬಳಿಕ ಹೆಚ್.ಡಿ ರೇವಣ್ಣ ಅವರು ಜಾಮೀನಿಗಾಗಿ ಜನಪ್ರತಿನಿಧಿಗಳ ನ್ಯಾಯಾಲಯ ಮೊರೆ ಹೋಗಿದ್ದರು. ರೇವಣ್ಣ ಪರ ವಕೀಲ ಸಿ.ವಿ ನಾಗೇಶ್ ವಾದ ಮಂಡಿಸಿದರು. ಇನ್ನು ಎಸ್‌ಐಟಿ ಪರ ಎಸ್‌ಎಸ್‌ಪಿ ಜಾಯ್ನಾ ಕೊಥಾರಿ ಅವರು ವಾದ ಮಂಡಿಸಿದರು. ಜಾಮೀನು ಸಿಕ್ಕರೂ ಇಂದು ಬಿಡುಗಡೆ ಭಾಗ್ಯವಿಲ್ಲ. ಯಾಕಂದ್ರೆ ಕೋರ್ಟ್ ಸೂಚಿಸಿರುವ ಐದು ಲಕ್ಷ ಬಾಂಡ್ ಜೊತೆ ಇಬ್ಬರ ಶೂರಿಟಿ ನೀಡಬೇಕು. ಅಲ್ಲದೇ ಕೋರ್ಟ್ ಜಾಮೀನು ಆದೇಶ ಪ್ರತಿಯನ್ನು ತೆಗೆದುಕೊಂಡು ಜೈಲಾಧಿಕಾರಿಗಳಿಗೆ ನೀಡಬೇಕು. ಹೀಗಾಗಿ ಇವೆಲ್ಲ ನೀಡಬೇಕಾದರೆ ಈಗಾಗಲೇ ಸಮಯ ಆಗಿದೆ. ಆಗಿದ್ದರಿಂದ ರೇವಣ್ಣ ನಾಳೆ ಮಂಗಳವಾರ ಸಂಜೆ ವೇಳೆಗೆ ಬಿಡುಗಡೆಯಾಗಲಿದ್ದಾರೆ.